ಇಂಗ್ಲೆಂಡ್ ತಂಡದ ಫೇಮಸ್ ಸ್ವಿಂಗ್ ಬೌಲರ್ ಆರ್ಡರ್ ಗೆ ಜನಾಂಗೀಯ ನಿಂದನೆಯಾಗಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಂದು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಇಂಗ್ಲೆಂಡ್‌ನ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಆರೋಪಿಸಿದ್ದಾರೆ
"ಜನಾಂಗೀಯ ನಿಂದನೆ ಬಹಳ ಬೇಸರ ತರುತ್ತದೆ. ಅದರಲ್ಲೂ ತಂಡವನ್ನು ಉಳಿಸುವ ಸಲುವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಈ ರೀತಿಯ ನಿಂದನೆ ಸಹಿಸಲಾಗದು. ಅಂದಹಾಗೆ ಪ್ರೇಕ್ಷಕರ ಬೆಂಬಲ ಅದ್ಭುತವಾಗಿತ್ತು. ಆದರೆ ಆ ಒಬ್ಬ ವ್ಯಕ್ತಿಯನ್ನು ಬಿಟ್ಟು. ಬಾರ್ಮಿ ಆರ್ಮಿ ಬೆಂಬಲೂ ಎಂದಿನಂತೆ ಅತ್ಯುತ್ತಮವಾಗಿತ್ತು," ಎಂದು ಜೋಫ್ರಾ ಆರ್ಚರ್ ತಮ್ಮ ಅಧಿಕೃತವಾಗಿ ಟ್ವಿಟಿಸಿದ್ದಾರೆ.
ಇಂಗ್ಲೆಡಿನ ಓವಲ್ ಕ್ರೀಡಾಂಗಣದಲ್ಲಿ ನಡೆದ 2 ಟೆಸ್ಟ್‌ಗಳ ಸರಣಿಯ ಪ್ರಥಮ ಟೆಸ್ಟ್ ಪಂದ್ಯದ ಐದನೇ ದಿನವಾದ ಇಂಗ್ಲೆಂಡ್ ತಂಡ ಕಿವೀಸ್ ವಿರುದ್ಧ ಇನಿಂಗ್ಸ್ ಮತ್ತು 65 ರನ್‌ಗಳ ಹೀನಾಯ ಸೋಲುಂಡಿತು. ಕಳೆದ ಜುಲೈನಲ್ಲಿ ಅಂತ್ಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಜೋಫ್ರಾ ಆರ್ಚರ್ ಮುಖ್ಯ ಪಾತ್ರ ವಹಿಸಿದ್ದರು. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಪರ ಬೌಲಿಂಗ್ ದಾಳಿ ಸಂಘಟಿಸಿದ್ದಿ ಇದೇ ಆರ್ಚರ್. ವಿಶ್ವಕಪ್ ಹೀರೊಗೆ ಈ ರೀತಿ ಜನಾಂಗೀಯ ನಿಂದನೆ ಮಾಡಿರುವುದನ್ನು ಖಂಡಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ವೇಗಿಯ ಬಳಿ ಕ್ಷಮೆ ಕೋರುವುದಾಗಿ ಹೇಳಿದೆ.
"ಕ್ರೀಡಾಂಗಣದಲ್ಲಿ ಇದ್ದ ಸಿಬ್ಬಂದಿ ಬಳಗ ಜನಾಂಗೀಯ ನಿಂದನೆಗೈದ ವ್ಯಕ್ತಿಯನ್ನು ಪತ್ತೆ ಹಚ್ಚಲು ವಿಫಲವಾಗಿದೆ. ಈ ವಿಚಾರವಾಗಿ ಹೆಚ್ಚಿನ ವಿಚಾರಣೆ ನಡೆಸಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಲಿದೆ.ಆ ವ್ಯಕ್ತಿಯನ್ನು ಪತ್ತೆ ಹಚ್ಚಲು ಎಲ್ಲಾ ಪ್ರಯತ್ನ ನಡೆಸಲಾಗುವುದು. ನಮ್ಮ ಯಾವುದೇ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಈರೀತಿಯ ಅವಹೇಳನಕಾರಿ ಮಾತುಗಳನ್ನು ಮಂಡಳಿ ಸಹಿಸುವುದಿಲ್ಲಎಂದಿದೆ.ಇಂಗ್ಲೆಂಡ್ ತಂಡ ಇದೀಗ ಸರಣಿಯನ್ನು 1-1ರಲ್ಲಿ ಸಮಬಲಮಾಡಿಕೊಳ್ಳುವ ಪ್ರಯತ್ನ ನಡೆಸಲಿದ್ದು, 2ನೇ ಟೆಸ್ಟ್ ಒಂದ್ಯ ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ