ಟಿ20 ವಿಶ್ವಕಪ್‌ಗೆ ವೇಗದ ಬೌಲರ್ ಗಳು ಇವರೇ ನೋಡಿ

Soma shekhar
ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ತನ್ನದೇ ಆದ ಚಾಪನ್ನು ಮೂಡಿಸಿ ನಂಬರ್ 1 ತಂಡವಾಗಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದೀಗ ಮುಂಬರುವ ಟೀ-ಟ್ವಂಟಿ ವಿಶ್ವಕಪ್ ನ ಹಾಟ್ ಫೇವರೇಟ್ ತಂಡವಾಗಿದ್ದು, ಟೀಂ ಇಂಡಿಯಾದ ವೇಗದ ಬೌಲಿಂಗ್ ನಲ್ಲಿ ಯಾರು ಚೆಂಡನ್ನು ಸ್ವಿಂಗ್ ಮಾಡುವರೆಂಬುದು  ಕ್ಯಾಪ್ಟನ್ ಕೊಹ್ಲಿ ಹೇಳಿದ್ದಾರೆ ನೋಡಿ. 
 
 ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂದಿನ ವರ್ಷ ಟಿ20ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಹಲವು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ ಎದುರಿಸಿರುವ ಟೀಮ್‌ ಇಂಡಿಯಾದ ವೇಗದ ಬೌಲಿಂಗ್‌ ವಿಭಾಗದಲ್ಲಿ ಕೇವಲ ಒಂದು ಜಾಗವಷ್ಟೇ ಖಾಲಿ ಇದೆ ಎಂಬ ಸುಳಿವನ್ನು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನೀಡಿದ್ದಾರೆ.
 
ಇದೇ ವೇಳೆ ಭಾರತದ ವಿಶ್ವಕಪ್‌ ತಂಡದಲ್ಲಿ ಸ್ಟಾರ್‌ ವೇಗಗಳಾದ ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ಅವರ ಸ್ಥಾನ ಬಹುತೇಕ ಖಾತ್ರಿ ಎಂಬ ಸುಳಿವನ್ನೂ ಟೀಮ್‌ ಇಂಡಿಯಾ ನಾಯಕ ಬಿಟ್ಟುಕೊಟ್ಟಿದ್ದಾರೆ. 
 
ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್‌ ವಿರುದ್ಧ ಸೀಮಿತ ಓವರ್‌ಗಳ ಸರಣಿಗಳನ್ನಾಡಲಿದ್ದು, 3ಪಂದ್ಯಗಳ ಅಂತಾರಾಷ್ಟ್ರೀಯ ಟಿ20ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನಾ ದಿನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಭಾರತ ತಂಡದ ವಿಶ್ವಕಪ್‌ ತಯಾರಿ ಕುರಿತಾಗಿ ಕೊಹ್ಲಿ ಮಾತನಾಡಿದ್ದಾರೆ. 
 
ಕೇವಲ ಒಂದು ಸ್ಥಾನಕ್ಕಾಗಿ ಮಾತ್ರವೇ ಪೈಪೋಟಿ ಇದೆ. ಉಳಿದ ಮೂರು ಸ್ಥಾನಗಳು ಈಗಾಗಲೇ ಬಹುತೇಕ ಖಾತ್ರಿಯಾಗಿದೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕಾಗಿ ಉತ್ತಮ ಪೈಪೋಟಿ ನಡೆಯಲಿದೆ. ಯಾರು ಈ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ," ಎಂದು ಕೊಹ್ಲಿ ಹೇಳಿದ್ದಾರೆ.
 
"ಯಾರನ್ನು ಆಡಿಸಬೇಕು ಯಾರನ್ನು ಆಡಿಸಬಾರದು ಎಂಬುದು ಸಮಸ್ಯೆಯೇ ಅಲ್ಲ. ಭುವಿ ಮತ್ತು ಜಸ್‌ಪ್ರೀತ್‌ ಇಬ್ಬರೂ ಅನುಭವಿ ಬೌಲರ್‌ಗಳು. ಟಿ20 ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಬಹಳ ಸ್ಥಿರವಾಗಿದೆ. ಈ ಮಧ್ಯೆ ದೀಪಕ್‌ ಚಹರ್‌ ಕೂಡ ಆಗಮಿಸಿದ್ದು, ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ," ಎಂದಿದ್ದು ಅವರು ಕೂಡ ವಿಶ್ವಕಪ್ ಟಿಕೆಟ್ ಪಡೆಯುವ ಚಾನ್ಸಸ್ ಗಳು ಹೆಚ್ಚಿವೆ. 

Find Out More:

Related Articles: