ಏಕದಿನ ಸರಣಿಯಲ್ಲಿ ಧವನ್ ಔಟ್, ಕನ್ನಡಿಗ ಮಯಾಂಕ್ ಅಗರ್ವಾಲ್‌ ಇನ್!

Soma shekhar
ಕುತೂಹಲ ಕೆರಳಿಸಿರುವ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಗಬ್ಬರ್ ಸಿಂಗ್ ಶಿಖರ್ ದವನ್ ಸ್ಥಾನಕ್ಕೆ ಇತ್ತೀಚೆಗಷ್ಟೇ ಟೆಸ್ಟ್ ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ಕನ್ನಡಿಗ ಮಾಯಾಂಕ್  ಅಗರ್ವಾಲ್ ಗೆ ಭರ್ತಿ ನೀಡಿ ಅವಕಾಶ ನೀಡಲಾಗಿದೆ. 
 
ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಎಡಗೈ ಆಕ್ರಮಣಕಾರಿ ಆರಂಭಿಕ ಟೀಂ ಇಂಡಿಯಾದ ಗಬ್ಬರ್ ಸಿಂಗ್ ಬ್ಯಾಟ್ಸ್‌ಮನ್ ಶಿಖರ್ ಧವನ್, ವೆಸ್ಟ್‌ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಅಲಭ್ಯವಾಗಿದ್ದಾರೆ. ಈ ಮೊದಲು ಇದೇ ಕಾರಣಕ್ಕಾಗಿ ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. ಗಾಯಾಳು ಶಿಖರ್ ಧವನ್ ಸ್ಥಾನಕ್ಕೆ ಕರ್ನಾಟಕ ಮಯಾಂಕ್ ಅಗರ್ವಾಲ್ ಅವರನ್ನು ಹೆಸರಿಸಲಾಗಿದೆ. ಆಗಲೇ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರವಾಗಿಸಿರುವ ಮಯಾಂಕ್‌ಗೆ ಈಗ ಏಕದಿನದಲ್ಲೂ ತಮ್ಮ ಸಾಮರ್ಥ್ಯ ತೋರಿಸಲು ಭರ್ಜರಿ ಅವಕಾಶ ವೊಂದು ಸಿಕ್ಕಿದೆ. 
 
ಇತ್ತೀಚೆಗಷ್ಟೇ ಸೂರತ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದ ವೇಳೆಯಲ್ಲಿ ಧವನ್ ಮೊಣಕಾಲಿಗೆ ಗಾಯ ಮಾಡಿದ್ದರು. ಆರಂಭದಲ್ಲಿ ವಿಂಡೀಸ್ ವಿರುದ್ಧದ ತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗಳಿಗೆ ಧವನ್‌ ರನ್ನು ಹೆಸರಿಸಲಾಗಿತ್ತು. ಆದರೆ ಗಾಯ ಗುಣಮುಖರಾಗದ ಹಿನ್ನಲೆಯಲ್ಲಿ ಟಿ20 ತಂಡಕ್ಕೆ ಧವನ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಏಕದಿನ ಸರಣಿಯಿಂದಲೂ ಹೊರಗುಳಿಯುವಂತಾಗಿದೆ. ಆದರೆ ಸಂಜು ಸ್ಯಾಮ್ ಸನ್ ಗೆ ಅವಕಾಶವನ್ನು ನೀಡಿಲೇ ಇಲ್ಲ. 
 
ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ  ಸರಣಿಯು ಅನುಕ್ರಮವಾಗಿ ಚೆನ್ನೈ (ಡಿ. 15), ವಿಶಾಖಪಟ್ಟಣ (ಡಿ. 18) ಹಾಗೂ ಕಟಕ್ (ಡಿ. 22) ಮೈದಾನಗಳಲ್ಲಿ ನಡೆಯಲಿದೆ.
 
ಭಾರತ ಏಕದಿನ ತಂಡ ಇಂತಿದೆ:
 
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಬ್ ಪಂತ್, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್.

Find Out More:

Related Articles: