ಮುಂಬಯಿ: ಟೀಂ ಇಂಡಿಯಾದ ದೈತ್ಯ ಬ್ಯಾಟ್ಸ್ ಮಾನ್ ಗಳಾದ ಹಿಟ್ ಮ್ಯಾನ್ ರೋಹಿತ್ 71, ಕನ್ನಡಿಗ ರಾಹುಲ್ 91, ಕ್ಯಾಪ್ಟನ್ ವಿರಾಟ್ 70 ರನ್ ಗಳ ಸ್ಪೋಟಕ ಬ್ಯಾಟಿಂಗ್ ಹಾಗೂ ಕರಾರುವಕ್ಕಾದ ಬೌಲಿಂಗ್ ನೆರವಿನಿಂದ ಕೆರಬೀಯನ್ನರ ವಿರುದ್ಧ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದು ಬೀಗಿತು.
240ರನ್ ಗಳಚೇಸಿಂಗ್ ಬೆನ್ನತ್ತಿದ ವಿಂಡೀಸ್ 17ರನ್ ಆಗುವಷ್ಟರಲ್ಲಿ ಸಿಮನ್ಸ್, ಕಿಂಗ್ ಮತ್ತು ಪೂರನ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಹೆಟ್‌ಮೈರ್-ಪೊಲಾರ್ಡ್ ಬಿರುಸಿನ ಆಟಕ್ಕಿಳಿದು ತಂಡವನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಹೆಟ್‌ಮೈರ್ 24 ಎಸೆತಗಳಿಂದ41 ರನ್ ಹೊಡೆದರೆ, ಸಿಡಿದು ನಿಂತ ಪೊಲಾರ್ಡ್ 39 ಎಸೆತ ಎದುರಿಸಿ68 ರನ್ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರು(5 ಬೌಂಡರಿ, 6 ಸಿಕ್ಸರ್).ಕಪ್ತಾನ ಪೊಲಾರ್ಡ್ ಕ್ರೀಸಿನಲ್ಲಿರುವಷ್ಟು ಹೊತ್ತು ವಿಂಡೀಸಿಗೆ ಗೆಲುವಿನ ಕ್ಷೀಣ ಅವಕಾಶವಿತ್ತು. ಅವರ ನಿರ್ಗಮನದ ಬಳಿಕ ವಿಂಡೀಸ್ ಮತ್ತೆ ಒತ್ತಡಕ್ಕೆ ಸಿಲುಕಿತು. ಗೆಲುವಿನ ಆಸೆಯನ್ನು ಕೈಬಿಟ್ಟಿತು.
ಸ್ಕೋರ್ ಪಟ್ಟಿ
ಟೀಂ ಇಂಡಿಯಾ:-
ರೋಹಿತ್ ಶರ್ಮ ಸಿ.ವಾಲ್ಶ್ ಬಿ ವಿಲಿಯಮ್ಸ್ 71
ಕೆ.ಎಲ್.ರಾಹುಲ್ ಸಿ.ಪೂರನ್ ಬಿ ಕಾಟ್ರೆಲ್ 91
ಪಂತ್ ಸಿ ಹೋಲ್ಡರ್ ಬಿ ಪೊಲಾರ್ಡ್ 0
ವಿರಾಟ್ ಕೊಹ್ಲಿ ಔಟಾಗದೆ 70
ಶ್ರೇಯಸ್ ಅಯ್ಯರ್ ಔಟಾಗದೆ 0
ಇತರ8
ಒಟ್ಟು20 ಓವರ್‌ಗಳಲ್ಲಿ 3 ವಿಕೆಟಿಗೆ 240
ವೆಸ್ಟ್ ಇಂಡೀಸ್
ಲೆಂಡ್ಲ್ ಸಿಮನ್ಸ್ ಸಿ ಅಯ್ಯರ್ ಬಿ ಶಮಿ 7
ಕಿಂಗ್‌ಸಿ ರಾಹುಲ್ ಬಿ ಭುವನೇಶ್ವರ್ 5
ಹೆಟ್‌ಮೈರ್ ಸಿ ರಾಹುಲ್ ಬಿ ಕುಲದೀಪ್ 41
ನಿಕೋಲಸ್ ಪೂರಣ್ ಸಿ ದುಬೆ ಬಿ ಚಹರ್ 0
ಪೊಲಾರ್ಡ್ ಸಿ ಜಡೇಜ ಬಿ ಭುವನೇಶ್ವರ್ 68
ಜಾಸನ್ ಹೋಲ್ಡರ್ ಸಿ ಪಾಂಡೆ ಬಿ ಕುಲದೀಪ್ 8
ಹೇಡನ್ ವಾಲ್ಶ್ ಬಿ ಶಮಿ 11
ಖಾರಿ ಪಿಯರೆ ಸಿ ಜಡೇಜ ಬಿ ಚಹರ್ 6
ಕೆಸ್ರಿಕ್ ವಿಲಿಯಮ್ಸ್ ಔಟಾಗದೆ 13
ಶೆಲ್ಡನ್ ಕಾಟ್ರೆಲ್ ಔಟಾಗದೆ 4
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 173.