ಹಿಟ್ ಮ್ಯಾನ್ ರೋಹಿತ್ ಶರ್ಮಾ  ದಾಖಲೆಯ 400 ಸಿಕ್ಸರ್

Soma shekhar
ಮುಂಬೈ: ಹಿಟ್ ಮ್ಯಾನ್, ಟೀಂ ಇಂಡಿಯಾದಲ್ಲಿ ನಿಂತಲ್ಲೇ ಸಿಕ್ಸರ್ ಸಿಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ. ಅದರಲ್ಲೂ ಟೀ-ಟ್ವಂಟೀ, ಏಕದಿನ ಪಂದ್ಯದಲ್ಲಿ ದೈತ್ಯ ಬ್ಯಾಟ್ಸ್ ಮ್ಯಾನ್. ಇದೀಗ ವೆಸ್ಟ್​​ ಇಂಡೀಸ್​​ ವಿರುದ್ಧ ನಡೆದ ಮೂರನೇ ಮತ್ತು ಅಂತಿಮ ಟಿ-20 ಕ್ರಿಕೆಟ್​ ಪಂದ್ಯದಲ್ಲಿ ಹಿಟ್​​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಹೌದು, ಟೀಂ ಇಂಡಿಯಾ ಆಟಗಾರ ನಿಂದ ಏನಪ್ಪಾ ಅದು ಸಿಕ್ಸರ್ ಸಿಡಿಸಿ ದಾಖಲೆ ಬರೆಯೋದು ಎಂದು ಆಶ್ಚರ್ಯ ವಾದರೂ ಸಹ ನಂಬಲೇಬೇಕಾದ ವಿಷಯವಿದು. 
 
ಮುಂಬೈ ರೋಹಿತ್ ನ ನೆಚ್ಚಿನ ಮತ್ತು ತವರು, ಹೆಚ್ಚು ಅಭ್ಯಾಸ ವಿರುವ ಮೈದಾನ. ಈ ಮೈದಾನದ ಕಣಕಣವೂ ಅರಿತಿರುವ ರೋಹಿತ್ ಮೂಲೆ ಮೂಲೆಗೂ ಚೆಂಡಿಗೆ ದರ್ಶನ ಮಾಡಿ ಸಿದವರು. ಇದೀಗ 3ನೇ ಟೀ-ಟ್ವಂಟೀ ಪಂದ್ಯದಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್,​ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾರತದ ಪರ 400 ಸಿಕ್ಸರ್​​ ಸಿಡಿಸಿದ ಏಕಮೇವ ಬ್ಯಾಟ್ಸ್​​ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಜಾಗತಿಕ ಕ್ರಿಕೆಟ್​​ನಲ್ಲಿ 400 ಸಿಕ್ಸರ್ ಸಿಡಿಸಿದವರಲ್ಲಿ ಮೂರನೇಯವರಾಗಿ ದಾಖಲೆ ಬರೆದಿದ್ದಾರೆ.  ಶೆಲ್ಡಾನ್ ಕಾಟ್ರೆಲ್ ಎಸೆದ ಮೂರನೇ ಓವರ್​​ನಲ್ಲಿ ಚೆಂಡನ್ನು ಡೀಪ್​ ಮಿಡ್​​ ವಿಕೆಟ್​​ ಮೇಲೆ ಪ್ರೇಕ್ಷಕರ ಗ್ಯಾಲರಿಗಟ್ಟಿದಾಗ ಈ ವಿಶಿಷ್ಟ ದಾಖಲೆ ನಿರ್ಮಾಣವಾಯಿತು. 71ರನ್​ಗಳ ಅವರ ಆಟದಲ್ಲಿ 5ಸಿಕ್ಸರ್​ಗಳು ಸೇರಿದ್ದವು. 
 
ವೆಸ್ಟ್ ಇಂಡೀಸ್​ನ ಬ್ಯಾಟಿಂಗ್ ದಿಗ್ಗಜ ಕ್ರಿಸ್​​ ಗೇಲ್ 534 ಸಿಕ್ಸರ್​ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಆಲ್​ರೌಂಡರ್ ಶಾಹಿದ್ ಅಫ್ರೀದಿ ಎರಡನೇ ಸ್ಥಾನದಲ್ಲಿದ್ದು 476ಸಿಕ್ಸರ್ ಸಿಡಿಸಿದ್ದಾರೆ.ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಇವರಿಬ್ಬರನ್ನು ಮೀರಿ ಮೊದಲನೇ ಸ್ಥಾನಕ್ಕೇರಲಿ ಎಂಬುದುಅಭಿಮಾನಿಗಳ ಆಶಯವಾಗಿದೆ. ಹಿಟ್ ಮ್ಯಾನ್ ನಾಯಕನಾಗಿಯೂ ಸಹ ಈ ಹಿಂದೆ ದಾಖಲೆ ಬರೆದಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿಯೂ ಸಹ ನನ್ನ ದಾಖಲೆ ಮುರಿಯಲು ರೋಹಿತ್ ಶರ್ಮಾ ಅವರಿಂದ ಮಾತ್ರ ಸಾಧ್ಯ ಎಂದು ಇತ್ತೀಚೆಗಷ್ಟೇ ತ್ರಿಬಲ್ ಸೆಂಚುರಿ ಭಾರಿಸಿದ ಡೇವಿಡ್ ವಾರ್ನರ್ ರೋಹಿತ್ ಬಗ್ಗೆ ಮಾತನಾಡಿದ್ದರು.

Find Out More:

Related Articles: