2019ರ ಟೀಂ ಇಂಡಿಯಾದ ಕ್ರಿಕೆಟ್ ಜರ್ನಿ
2019ರ ವರ್ಷ ಟೀಂ ಇಂಡಿಯಾ ಪಾಲಿಗೆ ಸಿಹಿ ಮತ್ತು ಕಹಿ ಎರಡು ದೊರೆತಿರುವ ವರ್ಷ. ಕಹಿಗಿಂತ ಸಿಹಿಯೇ ಹೆಚ್ಚು. ಸಾಲು ಸಾಲು ಸರಣಿಗಳನ್ನು ಗೆದ್ದಿದೆ. ಆಸ್ಟ್ರೇಲಿಯಾದಂತಹ ದೈತ್ಯರಿಗೆ ಸೋಲುಣಸಿದೆ. ಹೌದು, 2019ರ ಟೀಂ ಇಂಡಿಯಾದ ಜರ್ನಿ ಇಲ್ಲಿದೆ ನೋಡಿ.
ಭಾರತ ಆಡಿರುವ ನಾಲ್ಕು ಟೆಸ್ಟ್ ಸರಣಿಯಲ್ಲಿಯೂ ಭರ್ಜರಿ ಗೆಲುವು(2019)
ಆಸೀಸ್ ವಿರುದ್ಧ ಭಾರತಕ್ಕೆ 2-1ಅಂತರದಿಂದ ಸರಣಿ ಜಯ
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 2-0ಅಂತರದಿಂದ ಸರಣಿ ಗೆಲುವು
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 3-0ಅಂತರದಿಂದ ಸರಣಿ ಜಯ
ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 2-0ಅಂತರದ ಸರಣಿ ಗೆಲುವು.
ಐಸಿಸಿ ವಿಶ್ವಕಪ್:-
ಭಾರತ ತಂಡ ಸೆಮಿ ಫೈನಲ್ವರೆಗೂ ಪ್ರವೇಶ.ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು, ವಿಶ್ವಕಪ್ನಿಂದ ಹೊರಗೆ.ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆಯ ಸತತ 5 ಶತಕ ದಾಖಲು.ಮಹಮದ್ ಶಮಿಗೆ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್.
ಫಸ್ಟ್ ಟೀಂ ಇನ್ ವಲ್ಡ್ಕಪ್ ಮೊದಲ ಸೂಪರ್ ಓವರ್, ಸೂಪರ್ ಓವರ್ ಕೂಡ ಟೈ.
ಟಿ20 ಕ್ರಿಕೆಟ್:-
ಆಸೀಸ್ ವಿರುದ್ಧ ಭಾರತಕ್ಕೆ 2-0ಅಂತರದಿಂದ ಸರಣಿ ವಶ (ಫೆಬ್ರವರಿ)
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 3-0ಅಂತರದಿಂದ ಸರಣಿ ಗೆಲುವು (ಆಗಸ್ಟ್)
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 1-1ಅಂತರದಿಂದ ಸರಣಿ ಸಮಬಲಾ (ಸೆಪ್ಟಂಬರ್)
ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 2-1ಅಂತರದಿಂದ ಸರಣಿ ಜಯ (ನವೆಂಬರ್)
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 2-1 ಅಂತರದಿಂದ ಸರಣಿ ಗೆಲುವು (ಡಿಸೆಂಬರ್) ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ನಲ್ಲಿ ಭಾರತ ಸೋಲು-ಗೆಲುವು ಎರಡನ್ನು ಕಂಡಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4-1 ಅಂತರದಿಂದ ಸರಣಿ ಜಯ (ಜನವರಿ-ಫೆಬ್ರವರಿ)
ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 3-2 ಅಂತರದಿದ ಸರಣಿ ಗೆಲುವು (ಮಾರ್ಚ್)
ವೆಸ್ಟ್ ಇಂಡೀಸ್ ವಿರುದ್ದ್ಧ ಭಾರತಕ್ಕೆ 2-0 ಅಂತರದಿಂದ ಜಯ (ಆಗಸ್ಟ್)
ಬಿಸಿಸಿಐ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಯ್ಕೆ.ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊದಲ್ ಪಿಂಕ್ ಬಾಲ್ ಟೆಸ್ಟ್ ಆಯೋಜನೆ. ಇದಿಷ್ಟು ಭಾರತದ 2019ರ ಕ್ರಿಕೆಟ್ ಏಳು-ಬೀಳಿನ ಕಥೆಯಾಗಿದೆ.