ದೆಹಲಿ: ಕೆರೆಬಿಯನ್ನರ ವಿರುದ್ದ ಏಕದಿನ ಸರಣಿಯಲ್ಲಿ ಗೆದ್ದ ಬೆನ್ನಲ್ಲೇ ಶ್ರೀಲಂಕಾ ವಿರುದ್ಧ ಟೀ-ಟ್ವಂಟಿ ಸರಣಿ ಶುರುವಾಗಲಿದೆ. ಹೌದು, ಇದಕ್ಕಾಗಿ ಟೀಂ ಇಂಡಿಯಾ ತಂಡ ಪ್ರಕಟವಾಗಿದ್ದು ಯಾರಾರು ಸ್ಥಾನ ಪಡೆದಿದ್ದಾರೆ, ಯಾರು ರೆಸ್ಟ್ ಗೆ ತೆರಳಿದ್ದಾರೆ ಅಂತ ಇಲ್ನೋಡಿ.
ಯಾರ್ಕರ್ ಬೌಲರ್ ಜಸ್‌ಪ್ರೀತ್ ಬುಮ್ರಾ ಭಾರತತಂಡಕ್ಕೆ ವಾಪಸಾಗಿದ್ದಾರೆ. ಮುಂದಿನ ತಿಂಗಳು ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಗಾಗಿ ಸೋಮವಾರ ಪ್ರಕಟಿಸಲಾದ ತಂಡಗಳಲ್ಲಿ ಬುಮ್ರಾ ಹೆಸರು ಇದೆ. ಬುಮ್ರಾ ಆಗಮನದಿಂದಲೋ ಏನೋ, ಮತ್ತೋರ್ವ ಪೇಸ್ ಬೌಲರ್ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆಯೇ ಟಿ20 ಸರಣಿಯಿಂದ ರೋಹಿತ್ ಶರ್ಮ ರೆಸ್ಟ್ ಪಡೆದಿದ್ದಾರೆ.
ವಿಂಡೀಸ್ ಸರಣಿಯ ವೇಳೆ ಗಾಯಾಳಾಗಿ ಹೊರಬಿದ್ದ ಆರಂಭಕಾರ ಶಿಖರ್ ಧವನ್ ಕೂಡ ತಂಡಕ್ಕೆ ಮರಳಿದ್ದಾರೆ. ಟಿ20ತಂಡದಲ್ಲಿರುವ ಸಂಜು ಸ್ಯಾಮ್ಸನ್ ಮೀಸಲು ಆರಂಭಕಾರನಾಗಿರುತ್ತಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ತಿಳಿಸಿದರು. ಪ್ರತಿಭಾನ್ವಿತ ವೇಗಿ ದೀಪಕ್ ಚಹರ್ ಗಾಯಾಳಾಗಿದ್ದು, ಐಪಿಎಲ್ ಆರಂಭವಾಗುವ ತನಕ ವಿಶ್ರಾಂತಿಯಲ್ಲಿರುವ ಕಾರಣ ಆಯ್ಕೆ ವ್ಯಾಪ್ತಿಯಿಂದ ಹೊರಗುಳಿದರು.ಮಹೀಂದ್ರ ಸಿಂಗ್ ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ “ಇದಕ್ಕೆ ಪ್ರತಿಕ್ರಿಯಿಸಲಾರೆ’ ಎಂದು ಪ್ರಸಾದ್ ಹೇಳಿದರು.
ಟಿ20 ತಂಡ: ಶ್ರೀಲಂಕಾ ಸರಣಿಗೆ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ರವೀಂದ್ರ ಜಡೇಜ, ಶಿವಂ ದುಬೆ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾದೂìಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.
ಏಕದಿನ ತಂಡ: ಆಸ್ಟ್ರೇಲಿಯ ಸರಣಿಗೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಕೇದಾರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ನವದೀಪ್ ಸೈನಿ, ಶಾದೂìಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ