ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆಸೀಸ್ ಘಾತುಕವೇಗಿ ಪೀಟರ್ ಸಿಡ್ಲ್ ನಿವೃತ್ತಿ

frame ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆಸೀಸ್ ಘಾತುಕವೇಗಿ ಪೀಟರ್ ಸಿಡ್ಲ್ ನಿವೃತ್ತಿ

Soma shekhar
ಮೆಲ್ಬೋರ್ನ್: ಆಸೀಸ್ ತಂಡದ ಘಾತುಕವೇಗಿ ಮಿಂಚಿನ ಓಟ ದಿಂದಲೇ ವಿಕೆಟ್ ಗಳನ್ನು ಉರುಳಿಸುತ್ತಿದ್ದ ಈ ಬೌಲರ್ ನನ್ನು ಕಂಡರೇ, ಒಂದು ಸಂದರ್ಭದಲ್ಲಿ ಬ್ಯಾಟ್ಸ್ ಮ್ಯಾನ್ ಗಳು ಬ್ಯಾಟ್ ಬೀಸಲು ಎದರುತ್ತಿದ್ದರು. ಅಂತಹ ಬೌಲರ್ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಪೀಟರ್ ಸಿಡ್ಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 67 ಟೆಸ್ಟ್ ಪಂದ್ಯಗಳಲ್ಲಿ ಸಿಡ್ಲ್ ಒಟ್ಟು 221 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪೈಕಿ ಹ್ಯಾಟ್ರಿಕ್ ವಿಕೆಟ್‌ಗಳ ಸ್ಮರಣೀಯ ಸಾಧನೆ ಮಾಡಿದ್ದರು.
 
ಆದರೂ ಸಹ ಟ್ವೆಂಟಿ-20 ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ವಿಕ್ಟೋರಿಯಾ ಪರ ಆಡುವುದನ್ನು ಸಿಡ್ಲ್ ಮುಂದುವರಿಸಲಿದ್ದಾರೆ. ಹಾಗೆಯೇ ಇಂಗ್ಲಿಷ್ ಕೌಂಟಿಯಲ್ಲಿ ಎಸ್ಸೆಕ್ಸ್ ತಂಡದ ಪರ ತಮ್ಮ ಸೇವೆಯನ್ನು ನೀಡಲಿದ್ದಾರೆ. 2008ರಲ್ಲಿ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿರುವ ಸಿಡ್ಲ್, ಅಂದಿನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೊರದಬ್ಬುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಸಾಧನೆ ಮಾಡಿದ್ದರು.  2010ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಆ್ಯಶಸ್ ಟೆಸ್ಟ್ ಸರಣಿಯ ಪಂದ್ಯದಲ್ಲಿ ತಮ್ಮ 26ನೇ ಹುಟ್ಟುಹಬ್ಬದಂದೇ ಸಿಡ್ಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನ ಆಲಿಸ್ಟಾರ್ ಕುಕ್, ಮ್ಯಾಟ್ ಪ್ರಯರ್ ಹಾಗೂ ಸ್ಟುವರ್ಟ್ ಬ್ರಾಡ್ ಹೊರದಬ್ಬಿದ ಸಿಡ್ಲ್, ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಒಂಬತ್ತನೇ ಬೌಲರ್ ಎಂಬ ಹಿರಿಮೆಗೆ ಭಾಜನವಾದರು.
 
ಟೆಸ್ಟ್ ಸ್ಪೆಷಲಿಸ್ಟ್ ಬೌಲರ್ ಎನಿಸಿಕೊಂಡಿರುವ ಸಿಡ್ಲ್, ಸುದೀರ್ಘ ಸ್ಪೆಲ್ ಎಸೆಯುವುದರಲ್ಲಿ ಹೆಸರು ವಾಸಿಯಾಗಿದ್ದರು. ಆದರೂ ಇತರೆ ವೇಗಿಗಳಂತೆಯೇ ಗಾಯದ ಸಮಸ್ಯೆಯು ಪದೇ ಪದೇ ಕಾಡಿತ್ತು. ಗ್ಲೆನ್ ಮೆಕ್‌ಗ್ರಾಥ್ ಮುಂತಾದ ದಿಗ್ಗಜರ ನಿವೃತ್ತಿಯ ಬಳಿಕ ಟೆಸ್ಟ್‌ನಲ್ಲಿ ಆಸೀಸ್ ವೇಗದ ಪಡೆದ ಜವಾಬ್ದಾರಿಯನ್ನು ವಹಿಸಿ ಅಚ್ಚುಕಟ್ಟಾಗಿ ಸಮರ್ಥವಾಗಿ ತಮ್ಮ ಪಾತ್ರ ನಿರ್ವಹಿಸಿದ್ದರು. 
 
ಪೀಟರ್ ಸಿಡ್ಲ್ ವೃತ್ತಿ ಜೀವನ
ಟೆಸ್ಟ್:
ಪಂದ್ಯ: 67
ಇನ್ನಿಂಗ್ಸ್: 94
ರನ್: 1164
ಗರಿಷ್ಠ: 51
ಅರ್ಧಶತಕ: 2
ವಿಕೆಟ್: 221
ಅತ್ಯುತ್ತಮ ಬೌಲಿಂಗ್: 54/6
5 ವಿಕೆಟ್: 8

Find Out More:

Related Articles:

Unable to Load More