ಮುಂಬಯಿ ಕರ್ನಾಟಕ ನಡುವಿನ ಹೋರಾಟಕ್ಕೆ ಮಾಯಾಂಕ್  ಆಡೋದಿಲ್ಲ

Soma shekhar
ಬೆಂಗಳೂರು: ಟೆಸ್ಟ್ ಕ್ರಿಕೆಟ್ ನಲ್ಲಿ ಡಬಲ್ ಸೆಂಚುರಿ ಬಾರಿಸಿ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದ ಮಾಯಾಂಕ್ ಅಗರ್ವಾಲ್ ಅವರು ಕರ್ನಾಟಕ ರಣಜಿ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದರು. ಆದರೆ ಸಾಧ್ಯವಾಗುತ್ತಿಲ್ಲ. ಜ. 3ರಿಂದ ಮುಂಬಯಿ ವಿರುದ್ಧ ಆರಂಭವಾಗಲಿರುವ ರಣಜಿ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. 
 
ರಣಜಿ ಯಲ್ಲಿ ಮಾಯಾಂಕ್ ಕರ್ನಾಟಕ ದ ಪರವಾಗಿ ಅಬ್ಬರಿಸಲು ಸಿದ್ಧರಾಗಿದ್ದರು.ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ “ಎ’ ತಂಡದ ಪ್ರವಾಸದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಮಾಯಾಂಕ್‌ ಬದಲಿಗೆ ಆರ್‌. ಸಮರ್ಥ್ ಅವರನ್ನು ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಸೋಮವಾರ ವಷ್ಟೇ ಮುಂಬಯಿ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಸಮರ್ಥ್ ಅವರನ್ನು ಹೊರಗಿಡಲಾಗಿತ್ತು. ಪರಿಷ್ಕೃತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದು, ಮಾಯಾಂಕ್ ಗೆ ವಿಶ್ರಾಂತಿ ನೀಡಲಾಗಿದೆ. 
 
ಸೆಕೆಂಡ್ ದ್ರಾವಿಡ್ ಎಂದೇ ಕರೆಯಲ್ಪಡುವ ಅನುಭವಿ ಟೆಸ್ಟ್‌ ಕ್ರಿಕೆಟಿಗ ರಹಾನೆ ಹಾಗೂ ಪೃಥ್ವಿ ಶಾ ಕರ್ನಾಟಕ ವಿರುದ್ಧ ನಡೆಯಲಿರುವ ರಣಜಿ ಲೀಗ್‌ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿರುವ ರಹಾನೆ ಹಾಗೂ ಪೃಥ್ವಿ ಶಾ ತಂಡಕ್ಕೆ ಬಂದಿರುವುದರಿಂದ ತಂಡದ ಬಲ ಹೆಚ್ಚಿದ್ದು, ಇಬ್ಬರು ಅಬ್ಬರಿಸಲು ಸಿದ್ದರಾಗಿದ್ದಾರೆ. 
 
ಕರ್ನಾಟಕ ತಂಡ:
 
ಕರುಣ್‌ ನಾಯರ್‌ (ನಾಯಕ), ದೇವದತ್ತ ಪಡಿಕ್ಕಲ್‌, ಡಿ.ನಿಶ್ಚಲ್‌, ಆರ್‌. ಸಮರ್ಥ್, ಅಭಿಷೇಕ್‌ ರೆಡ್ಡಿ, ಬಿ.ಆರ್‌. ಶರತ್‌, ರೋಹನ್‌ ಕದಮ್‌, ಶ್ರೇಯಸ್‌ ಗೋಪಾಲ್‌ (ಉಪನಾಯಕ), ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ವಿ.ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ.
 
ಮುಂಬಯಿ ತಂಡ :
 
ಸೂರ್ಯಕುಮಾರ್‌ ಯಾದವ್‌ (ನಾಯಕ), ಆದಿತ್ಯ ತಾರೆ, ಅಜಿಂಕ್ಯ ರಹಾನೆ, ಪೃಥ್ವಿ ಶಾ, ಸಫ್ರಾìಜ್‌ ಖಾನ್‌, ಶುಭಂ ರಂಜನೆ, ಆಕಾಶ್‌ ಪರ್ಕರ್‌, ಸಿದ್ದೇಶ್‌ ಲಾಡ್‌, ಶಾಮ್ಸ್‌ ಮಲಾನಿ, ವಿನಾಯಕ್‌ ಭೋಯಿರ್‌, ಶಶಾಂಕ್‌ ಅತ್ತಾರಡೆ, ರೋಯಿಸ್ಟನ್‌ ದಿಯಾಸ್‌, ತುಷಾರ್‌ ದೇಶಪಾಂಡೆ, ದೀಪಕ್‌ ಶೆಟ್ಟಿ, ಏಕನಾಥ್‌ ಕೆರ್ಕರ್‌

Find Out More:

Related Articles: