2020ರ ಮೊದಲ ಗೆಲುವಿನ ಸಂಭ್ರಮ ಆಚರಿಸಿದ ಟೀಮ್ ಇಂಡಿಯಾ

Soma shekhar
ಇಂದೋರ್‌: ಗುವಾಹಟಿ ಯಲ್ಲಿ ಮಳೆಯಿಂದ ಪಂದ್ಯ ರದ್ದಾದರೂ ಸಹ ಇಂದೋರ್ ನ ಹೊಳ್ಕರ್‌ ಕ್ರೀಡಾಂಗಣದಲ್ಲಿ ಲಂಕಾ ಪಡೆಯನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ 2020 ಹೊಸ ವರ್ಷದ ಮೊದಲ ಗೆಲುವಿನ ಸಂಭ್ರಮ ಭರ್ಜರಿಯಾಗಿ ಆಚರಿಸಿದೆ.
 
ಮಂಗಳವಾರ ನಡೆದ 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಂಕಾ ಪಡೆಯನ್ನು 20 ಓವರ್‌ಗಳಲ್ಲಿ 142/9 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾಯಿತು. ಬಳಿಕ ಗುರಿ ಬೆನ್ನತ್ತಿ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ನಷ್ಟದಲ್ಲಿ 144 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.
 
ಭಾರತದ ಪರ ಭರ್ಜರಿಯಾಗಿ ಬ್ಯಾಟ್‌ ಬೀಸಿದ ಕನ್ನಡಿಗ ಕೆಎಲ್‌ ರಾಹುಲ್‌ 32 ಎಸೆತಗಳಲ್ಲಿ 6 ಫೋರ್‌ಗಳೊಂದಿಗೆ 45 ರನ್‌ ಚಚ್ಚಿ ಉತ್ತಮ ಆರಂಭ ಒದಗಿಸಿಕೊಟ್ಟರೆ, ಮತ್ತೊಬ್ಬ ಆರಂಭಕಾರ ಶಿಖರ್‌ ಧವನ್‌ 32 ರನ್‌ (29 ಎಸೆತ) ಉತ್ತಮ ಸಾಥ್‌ ನೀಡಿದರು. ನಂತರ ಬ್ಯಾಟಿಂಗ್‌ಗೆ ಬಂದ ಶ್ರೇಯಸ್‌ ಅಯ್ಯರ್‌ 26 ಎಸೆತಗಳಲ್ಲಿ 34 ರನ್‌ ಚಚ್ಚಿ ಜಯದ ಹಾದಿಯನ್ನು ಸುಗಮವಾಗಿಸಿದರೆ, ಕ್ಯಾಪ್ಟನ್‌ ಕೊಹ್ಲಿ 17 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ಮೆರೆದರು. ಪಂದ್ಯದಲ್ಲಿ ಭಜ್ಜಿ ರೂಪ ತಾಳಿದ ಕಿಂಗ್‌ ಕೊಹ್ಲಿ ಗಮನ ಸೆಳೆದರು.
 
ಸ್ಕೋರ್ ಪಟ್ಟಿ ಇಲ್ಲಿದೆ ನೋಡಿ:
ಶ್ರೀಲಂಕಾ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 142  (ಧನುಷ್ಕ ಗುಣತಿಲಕ 20, ಅವಿಷ್ಕ ಫರ್ನಾಂಡೊ 22, ಕುಶಲ್‌ ಪೆರೆರಾ 34, ಧನಂಜಯ ಡಿ'ಸಿಲ್ವಾ 17, ವಾನಿಂದು ಹಸರಂಗ ಔಟಾಗದೆ 16; ಶಾರ್ದುಲ್‌ ಠಾಕೂರ್‌ 23ಕ್ಕೆ 3, ನವದೀಪ್‌ ಸೈನಿ 18ಕ್ಕೆ 2, ಕುಲ್ದೀಪ್‌ ಯಾದವ್‌ 38ಕ್ಕೆ 2, ವಾಷಿಂಗ್ಟನ್‌ ಸುಂದರ್‌ 28ಕ್ಕೆ 1, ಬುಮ್ರಾ 32ಕ್ಕೆ 1).
 
ಭಾರತ: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 144 (ಕೆಎಲ್‌ ರಾಹುಲ್‌ 45, ಶಿಖರ್‌ ಧವನ್‌ 32, ಶ್ರೇಯಸ್ ಅಯ್ಯರ್‌ 34, ವಿರಾಟ್‌ ಕೊಹ್ಲಿ 30*; ವಾನಿಂದು ಹಸರಂಗ 30ಕ್ಕೆ 2).

Find Out More:

Related Articles: