ಕಿವೀಸ್ ಸರಣಿಗೆ ಭಾರತ ತಂಡ, ಹಾರ್ದಿಕ್ ಪಾಂಡ್ಯ ಆಯ್ಕೆಯ ನಿರೀಕ್ಷೆ

Soma shekhar
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಟೀಮ್ ಇಂಡಿಯಾ ಆಯ್ಕೆ ಭಾನುವಾರದಂದು ನಡೆಯಲಿದೆ. ಗಾಯಮುಕ್ತ ಗೊಂಡಿರುವ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಹಾಗೂ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವರೇ ಎಂಬ ನಿರೀಕ್ಷೆಗಳಿವೆ. 
 
ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆ ಭಾನುವಾರದಂದು ನಡೆಯಲಿದೆ. ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಪುನರಾಗಮನದ ಹೊಸ್ತಿಲಲ್ಲಿರುವ ಬಲಗೈ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡುವರೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟಿ20, ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿದೆ. ಇದಕ್ಕೂ ಮೊದಲು ಭಾರತ 'ಎ' ತಂಡವು ನ್ಯೂಜಿಲೆಂಡ್ 'ಎ' ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಏಕದಿನ ಹಾಗೂ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಭಾರತ 'ಎ' ತಂಡದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದು, ಮ್ಯಾಚ್ ಫಿಟ್ನೆಸ್ ಸಾಬೀತು ಮಾಡುವ ಅವಕಾಸ ಪಡೆದಿದ್ದಾರೆ.  ಭಾರತ 'ಎ' ಮತ್ತು ಕಿವೀಸ್ 'ಎ' ನಡುವಣ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯು ಜನವರಿ 26ಕ್ಕೆ ಕೊನೆಗೊಳ್ಳಲಿದೆ. ಈ ನಡುವೆ ಟಿ20 ಸರಣಿಯು ಜನವರಿ 24ರಂದು ಆರಂಭವಾಗಲಿದೆ. ಹಾಗಾಗಿ ಜನವರಿ 29ರಂದು ನಡೆಯಲಿರುವ ಮೂರನೇ ಟಿ20 ಪಂದ್ಯದ ವೇಳೆಯಾಗುವಾಗ ಹಾರ್ದಿಕ್ ಪಾಂಡ್ಯ ತಂಡವನ್ನು ಸೇರಿಕೊಳ್ಳುವರೇ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಇಂದು ಸಂಜೆ ವರೆಗೂ ಕಾಯಬೇಕಾಗಿದೆ.
 
ಒಟ್ಟಾರೆ ನ್ಯೂಜಿಲೆಂಡ್ ಸರಣಿಯಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಸೇರಿದಂತೆ ಒಟ್ಟು ಎಂಟು ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿರುವುದರಿಂದ 15ರ ಬದಲು 16 ಅಥವಾ 17 ಸದಸ್ಯ ಬಳಗದ ತಂಡವನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಬಲಿಷ್ಠ ತಂಡ ಸಂಯೋಜನೆ ರೂಪಿಸಿಕೊಳ್ಳುವುದು ಟೀಮ್ ಇಂಡಿಯಾ ಗುರಿಯಾಗಿದೆ. ಈಗಾಗಲೇ ವಿಶ್ವಕಪ್ ತಂಡಕ್ಕಾಗಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಪ್ರಯೋಗಗಳು ನಡೆಸಲಾಗುತ್ತಿದೆ. ಈ ಬಾರಿ ಕಪ್ ಗೆದ್ದೇ ಗೆಲ್ಲಬೇಕು ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

Find Out More:

Related Articles: