ಬೆಂಗಳೂರು: ಹಿಟ್ ಮ್ಯಾನ್ ದಾಖಲೆಯ ಶತಕದಾಟದಿಂದ, ವಿರಾಟ್ ಹಾಗೂ ಅಯ್ಯರ್ ಉಪಯುಕ್ತ ಆಟದಿಂದ ಟೀಂ ಇಂಡಿಯಾ ಆಸೀಸ್ ವಿರುದ್ಧದ ಏಕದಿನ ಸರಣಿಯನ್ನು ಕೈವಶಮಾಡಿಕೊಂಡಿದೆ. ಹಾಗಾದರೆ ರೋಹಿತ್ ಶತಕದಾಟದ ವಿಶೇಷತೆಯೇನು? ಗೊತ್ತಾ.
ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3 ಪಂದ್ಯಗಳ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಿದ 'ಹಿಟ್ ಮ್ಯಾನ್' ಖ್ಯಾತಿಯ ಸ್ಫೋಟಕ ಬ್ಯಾಟ್ಸ್‌ಮನ್ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ ತಮ್ಮ 29ನೇ ಶತಕ ಬಾರಿಸಿದರು. ಈ ಮೂಲಕ 2020 ರಲ್ಲಿ ಭಾರತದ ಪರ ಮೊದಲ ಸೆಂಚುರಿ ಹೊಡೆದ ಬ್ಯಾಟ್ಸ್‌ಮನ್ ಎನಿಸಿದರು. ಈ ಸೆಂಚುರಿಗೊಂದು ವಿಶೇಷತೆಯಿದೆ. ಎದುರಿಸಿದ 128 ಎಸೆತಗಳಲ್ಲಿ 8 ಫೋರ್ ಮತ್ತು 6 ಸಿಕ್ಸರ್ ಸಿಡಿಸಿದ ರೋಹಿತ್ ಒಟ್ಟು, 119 ರನ್ ಸಿಡಿಸಿ ಔಟ್ ಆದರು. ಲೆಗ್ ಸ್ಪಿನ್ನರ್ ಆಡಮ್ ಝಾಂಪ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯಲೆತ್ನಿಸಿ ಲಾಂಗ್ ಆನ್ ನಲ್ಲಿದ್ದ ಮಿಚೆಲ್ ಸ್ಟಾರ್ಕ್ ಕೈಗೆ ಕ್ಯಾಚಿತ್ತರು.
ಅಂದಹಾಗೆ ರೋಹಿತ್ ತಮ್ಮ ಈ ಅದ್ಭುತ ಇನಿಂಗ್ಸ್ ವೇಳೆ ಹಲವು ದಾಖಲೆಗಳನ್ನು ಮುರಿದಿದ್ದು ಅವುಗಳ ವಿವರ ಇಂತಿದೆ. ಸೌರವ್ ಗಂಗೂಲಿ ದಾಖಲೆಯನ್ನು ದೂಳೀಪಟ ಮಾಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ಸತತ 5 ಶತಕ ಬಾರಿಸಿ ಹುಬ್ಬೇರಿಸಿದ್ದರು. ದಾಖಲೆ ಬರೆದು 2019ರ ಐಸಿಸಿ ಯಿಂದ ಪ್ರಶಸ್ತಿ ಪಡೆದು ಮಿಂಚಿದ್ದರು.
ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರಲ್ಲಿ ಟಾಪ್ 4:
1) ಸಚಿನ್ ತೆಂಡೂಲ್ಕರ್ (ಭಾರತ): 49
2) ವಿರಾಟ್ ಕೊಹ್ಲಿ (ಭಾರತ): 43*
3) ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 30
4) ರೋಹಿತ್ ಶರ್ಮಾ (ಭಾರತ): 29*
ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ಸ್
ರೋಹಿತ್ ಶರ್ಮಾ: 243
ಕ್ರಿಸ್ ಗೇಲ್: 242
ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್
ರೋಹಿತ್ ಶರ್ಮಾ: 415
ಕ್ರಿಸ್ ಗೇಲ್: 413