ಕಿವೀಸ್ ನ ಕಿವಿ ಹಿಂಡಿದ ಭಾರತ, ಮೊದಲ ಟಿ20ಯಲ್ಲಿ ಆರ್ಭಟದ ಗೆಲುವು

Soma shekhar
ಆಕ್ಲೆಂಡ್: ಕಿವೀಸ್ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ದಾಖಲೆಯ 203ರನ್ ಚೇಸಿಂಗ್ ಮಾಡುವ ಮೂಲಕ ಟೀಂ ಇಂಡಿಯಾ ಪ್ರವಾಸವನ್ನು ಭರ್ಜರಿ ಗೆಲುವಿನೊಂದಿಗೆ ಶುಭಾರಂಭಗೊಳಿಸಿದೆ. ಆಕ್ಲಂಡ್ ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗುವ ಮೂಲಕ ಕಿವೀಸ್ ನ ಕಿವಿ ಹಿಂಡಿದೆ. 
 
ನ್ಯೂಝಿಲ್ಯಾಂಡ್ ನೀಡಿದ 203 ರನ್ ಗಳ ಭರ್ಜರಿ ಸವಾಲನ್ನು ಬೆನ್ನತ್ತಿದ್ದ ಭಾರತ ಕೆ.ಎಲ್. ರಾಹುಲ್ (56), ಶ್ರೇಯಸ್ ಅಯ್ಯರ್  58* ಅವರ ಭರ್ಜರಿ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ 45 ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 06 ವಿಕೆಟ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತು. 19 ಓವರ್ ಗಳಲ್ಲಿ ಭಾರತ ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ವಿದೇಶಿ ಪಿಚ್ ನಲ್ಲಿ ದಾಖಲೆಯ ಚೇಸಿಂಗ್ ಮಾಡಿದ ದಾಖಲೆಯನ್ನು ಬರೆಯಿತು.  ಇದಕ್ಕೂ ಮೊದಲು ಟಾಸ್ ಗೆದ್ದ ವಿರಾಟ್ ಕೊಹ್ಲಿ ನ್ಯೂಝಿಲ್ಯಾಂಡನ್ನು ಬ್ಯಾಟಿಂಗ್ ಗೆ ಇಳಿಸಿದರು. ಕಾಲಿನ್ ಮನ್ರೋ (59), ನಾಯಕ ಕೇನ್ ವಿಲಿಯಮ್ಸನ್ (26 ಎಸೆತೆಗಳಲ್ಲಿ 51) ಮತ್ತು ಇನ್ನಿಂಗ್ಸ್ ನ ಕೊನೆಯಲ್ಲಿ ಅನುಭವಿ ರಾಸ್ ಟಯ್ಲರ್ (27 ಎಸೆತಗಳಲ್ಲಿ ಅಜೇಯ 54) ಅವರ ಸ್ಪೋಟಕ ಆಟದ ನೆರವಿನಿಂದ ನ್ಯೂಝಿಲ್ಯಾಂಡ್ ನಿಗದಿತ 20 ಓವರುಗಳಲ್ಲಿ 05 ವಿಕೆಟ್ ಗಳನ್ನು ಕಳೆದುಕೊಂಡು 203 ರನ್ ಗಳನ್ನು ಕಲೆ ಹಾಕಿತು. 
 
ಈ ಗುರಿಯನ್ನು ಬೆನ್ನತ್ತಲಾರಂಭಿಸಿದ ಭಾರತಕ್ಕೆ ಉತ್ತಮ ಆರಂಭವೇನೂ ಲಭಿಸಲಿಲ್ಲ. ತಂಡದ ಮೊತ್ತ 16 ಆಗುವಷ್ಟರಲ್ಲಿ ರೋಹಿತ್ ಶರ್ಮಾ 07 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ರಾಹುಲ್ ಜೊತೆಯಾದ ವಿರಾಟ್ 46 ರನ್, ಎರಡನೇ ವಿಕೆಟಿಗೆ ಈ ಜೋಡಿ 99 ರನ್ ಗಳನ್ನು ಕಲೆಹಾಕುವ ಮೂಲಕ ಗೆಲುವಿನ ಬುನಾದಿಯನ್ನು ಕಟ್ಟಿಕೊಟ್ಟರು. ಐಯ್ಯರ್ 58, ರಾಹುಲ್ 56 ಸಿಡಿಸಿ ಮಿಂಚಿದರು. ಈ ಮೂಲಕ ವಿದೇಶಿ ಪಿಚ್ ಒಂದರಲ್ಲಿ ದಾಖಲೆಯ ಚೇಸಿಂಗ್ ಮಾಡಿದ ದಾಖಲೆ ಬರೆಯಿತು.

Find Out More:

Related Articles: