ಸೂಪರ್ ಒವರ್ ನಲ್ಲಿ ಸೂಪರ್ ಹಿಟ್ ಮ್ಯಾನ್, ಭಾರತಕ್ಕೆ ಸರಣಿ ಜಯ

Soma shekhar
ಹ್ಯಮಿಲ್ಟನ್‌: ಅಬ್ಬಾ.. ಅದ್ಭುತ ಪಂದ್ಯ. ಕ್ಷಣ ಕ್ಷಣಕ್ಕೂ ರೋಚಕತೆ ಹುಟ್ಟಿಸಿದ ಆ ಪಂದ್ಯದ ಸೂಪರ್ ಓವರ್ ಕನ್ತುಂಬಿಕೊಂಡವರೇ ಅದೃಷ್ಟವಂತರು.ಮೊದಲಿಗೆ ಪಂದ್ಯದ ಅದ್ಭುತ ರೀತಿಯಲ್ಲಿ ಟೈ ಆದರೆ, ನಂತರದ ಫಲಿತಾಂಶಕ್ಕಾಗಿ ನಡೆದ ಸೂಪರ್‌ ಓವರ್‌ ಕಾದಾಟ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನಷ್ಟೇ ಅಲ್ಲ ವಿಶ್ವದ ವಿವಿಧ ಭಾಗಗಳಲ್ಲಿ ಟೆಲಿವಿಷನ್‌ ಮುಂದಿದ್ದ ವೀಕ್ಷಕರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕೊನೆಗೂ ಹಿಟ್ ಮ್ಯಾನ್ ಸೂಪರ್ ಬ್ಯಾಟಿಂಗ್ ನಿಂದ ಸರಣಿ ಗೆದ್ದು ಬೀಗಿತು. 
 
ಪಂದ್ಯದಲ್ಲಿ ಎರಡು ತಂಡಗಳು ತಮ್ಮ ಪಾಲಿನ 20 ಓವರ್‌ ಗಳಲ್ಲಿ 179 ರನ್‌ಗಳನ್ನು ಗಳಿಸಿದ್ದರಿಂದ ಪಂದ್ಯ ಟೈ ಆದ ಸಂದರ್ಭದಲ್ಲಿ ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ನಡೆಸಲಾಗಿತ್ತು ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 6 ಎಸೆತಗಳಲ್ಲಿ 17 ರನ್‌ ಬಾರಿಸಿ ಭಾರತಕ್ಕೆ 18 ರನ್‌ಗಳ ಕಠಿಣ ಗುರಿಯನ್ನೇ ನೀಡಿತ್ತು. ಆದರೆ, ಗುರಿ ಬೆನ್ನತ್ತಿದ ಭಾರತ ತಂಡ ರೋಹಿತ್‌ ಶರ್ಮಾ ಅವರ 4 ಎಸೆತಗಳಲ್ಲಿ ಅಜೇಯ 15 ರನ್‌ಗಳ ನೆರವಿನಿಂದ 6 ಎಸೆತಗಳಲ್ಲಿ 20 ರನ್‌ ಬಾರಿಸಿ ಜಯ ದಕ್ಕಿಸಿಕೊಂಡಿತು. ಅವರಿಗೆ ಕೆಎಲ್‌ ರಾಹುಲ್‌ (5*) ಉತ್ತಮ ಸಾಥ್‌ ನೀಡಿದರು. ಒತ್ತಡದ ಸಂದರ್ಭದಲ್ಲಿ ಸತತ 2 ಸಿಕ್ಸರ್‌ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟ ರೋಹಿತ್‌ ಶರ್ಮಾ, ಸೂಪರ್‌ ಓವರ್‌ನಲ್ಲಿ ಅನುಸರಿಸಿದ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ಪಂದ್ಯದ ಬಳಿಕ ತಿಳಿಸಿದರು. 
 
ಸಂಕ್ಷಿಪ್ತ ಸ್ಕೋರ್‌:
ಭಾರತ: 20ಓವರ್‌ ಗಳಲ್ಲಿ 179/5 (ರೋಹಿತ್‌ ಶರ್ಮಾ 65, ಕೆಎಲ್‌ ರಾಹುಲ್‌ 27, ವಿರಾಟ್ ಕೊಹ್ಲಿ 38; ಹ್ಯಾಮಿಶ್‌ ಬೆನೆಟ್‌ 54ಕ್ಕೆ 3, ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌ 13ಕ್ಕೆ 1).
ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 179/6 (ಮಾರ್ಟಿನ್‌ ಗಪ್ಟಿಲ್‌ 31, ಕೇನ್‌ ವಿಲಿಯಮ್ಸನ್‌95; ಶಾರ್ದುಲ್‌ ಠಾಕೂರ್‌ 21ಕ್ಕೆ 2, ಮೊಹಮ್ಮದ್‌ ಶಮಿ 32ಕ್ಕೆ 2).
 
ಸೂಪರ್‌ ಓವರ್‌ ವಿವರ
ನ್ಯೂಜಿಲೆಂಡ್‌: 17/0(ಕೇನ್‌ ವಿಲಿಯಮ್ಸನ್‌ 12*, ಮಾರ್ಟಿನ್‌ ಗಪ್ಟಿಲ್‌ 5*).
ಭಾರತ: 20/0 (ರೋಹಿತ್‌ ಶರ್ಮಾ15*, ಕೆಲ್‌ ರಾಹುಲ್‌ 5*).

Find Out More:

Related Articles: