ಫೈನಲ್ ಆಸೆ ಚಿಗುರುವಂತೆ ಮಾಡಿದ ಭಾರತದ ವನಿತೆಯರ ಚೇಸಿಂಗ್

frame ಫೈನಲ್ ಆಸೆ ಚಿಗುರುವಂತೆ ಮಾಡಿದ ಭಾರತದ ವನಿತೆಯರ ಚೇಸಿಂಗ್

Soma shekhar
ಮೆಲ್ಬೋರ್ನ್: ಭಾರತದ ವನಿತೆಯರ ಮೊದಲಿನಿಂದಲೂ ಸಾಲು ಸಾಲು ಸರಣಿ ಗೆದ್ದು ಇದೀಗ ಕೊಂಚ ಸಾಧಾರಣ ಮಟ್ಟದ ಆಟದಿಂದಾಗಿ ಇನ್ನೇನು ಟೂರ್ನಿಯಿಂದ ಹೊರಬಿತ್ತು  ಎನ್ನುವಷ್ಟರಲ್ಲಿ ಇದೀಗ ದಾಖಲೆಯ ಚೇಸಿಂಗ್ ಮಾಡಿ ಫೈನಲ್ ಆಸೆಯನ್ನು ಜೀವಂತ ವಾಗಿರಿಸಿಕೊಂಡಿದೆ. ಹೌದು, ಅಷ್ಟೊಂದು ರನ್ಸ್  ಚೇಸಿಂಗ್ ಮಾಡಿದ್ದಾದರೂ ಯಾರು ಗೊತ್ತಾ!? ಇಲ್ಲಿದೆ ನೋಡಿ ಡೀಟೈಲ್ಸ್. 
 
ಭಾರತ ವನಿತೆಯರ ತಂಡದ ಆರಂಭಿಕ ಬ್ಯಾಟುಗಾರ್ತಿ ಯರಾದ ಶಫಾಲಿ ವರ್ಮ (49ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಸ್ಮೃತಿ ಮಂದನಾ (55ರನ್, 48 ಎಸೆತ, 7 ಬೌಂಡರಿ) ಜೋಡಿಯ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ತ್ರಿಕೋನ ಟಿ20 ಸರಣಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 7 ವಿಕೆಟ್ ಜಯ ದಾಖಲಿಸಿತು. ಇದರಿಂದ ಲೀಗ್​ ನಲ್ಲಿ 2ನೇ ಜಯ ದಾಖಲಿಸಿದ ಭಾರತ ಫೈನಲ್ ಆಸೆಯನ್ನು ಜೀವಂತವಾಗಿರಿಸಿ ಕೊಂಡಿತು.
 
ಜಂಕ್ಷನ್ ಓವೆಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಆಶ್ಲೆಗ್ ಗಾರ್ಡ್​ನರ್ (93 ರನ್, 57 ಎಸೆತ, 11  ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​ಗೆ 173 ರನ್ ಕಲೆಹಾಕಿದರೆ, ಪ್ರತಿಯಾಗಿ ಶಫಾಲಿ ವರ್ಮ ಹಾಗೂ ಸ್ಮೃತಿ ಮಂದನಾ ಜೋಡಿ ಮೊದಲ ವಿಕೆಟ್​ಗೆ 50 ಎಸೆತಗಳಲ್ಲಿ 85 ರನ್ ಪೇರಿಸಿದ ಫಲವಾಗಿ ಭಾರತ 19.4 ಓವರ್​ಗಳಲ್ಲಿ 3 ವಿಕೆಟ್​ಗೆ 177 ರನ್ ಪೇರಿಸಿ ಜಯ ದಾಖಲಿಸಿತು. ಈ ಮೂಲಕ ಲೀಗ್ ಹಂತದಲ್ಲೇ ಹೊರ ಹೋಗುವ ಸಂಭವದಿಂದ ಪಾರಾಯಿತು. ಟೀಂ ಇಂಡಿಯಾಗೆ ಇದು ದಾಖಲೆಯ ಚೇಸಿಂಗ್ ಕೂಡ ಆಗಿದೆ. 
 
ಸಂಕ್ಷಿಪ್ತ ಸ್ಕೋರ್ ಪಟ್ಟಿ:
 
ಆಸ್ಟ್ರೇಲಿಯಾ: 5 ವಿಕೆಟ್​ಗೆ 173 (ಗಾರ್ಡ್​ನರ್ 93, ಲ್ಯಾನಿಂಗ್ 37, ದೀಪ್ತಿ ಶರ್ಮ 27ಕ್ಕೆ 2),
 ಭಾರತ: 19.4 ಓವರ್​ಗಳಲ್ಲಿ 3 ವಿಕೆಟ್​ಗೆ 177 (ಶಫಾಲಿ 49, ಸ್ಮೃತಿ 55, ಜೇಮಿಮಾ 30, ಹರ್ವನ್​ ಪ್ರೀತ್ ಕೌರ್ 20*).

Find Out More:

Related Articles:

Unable to Load More