ಕರಾಚಿ: ಪಾಕಿಸ್ತಾನ ಮಾಜಿ ಕ್ರಿಕೆಟರ್ ಶಾಹೀದ್ ಅಫ್ರಿದಿ ಐದನೇ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ವಿಚಾರವನ್ನು ಟ್ವೀಟ್ ಮೂಲಕ ಹಂಚಿಕೊಂಡ ಅವರ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಯಾಕೆ ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ.
ದೇವರ ಅನಂತಾನಂತ ಆಶೀರ್ವಾದ, ಕರುಣೆ ನನ್ನ ಮೇಲೆ ಇದೆ. ಈಗಾಗಲೇ ನನಗೆ ನಾಲ್ವರು ಚೆಂದನೆಯ ಹೆಣ್ಣುಮಕ್ಕಳಿದ್ದಾರೆ. ಈಗ ಐದನೇ ಹೆಣ್ಣುಮಗು ಹುಟ್ಟಿದೆ. ಇದು ದೇವರ ಆಶೀರ್ವಾದ ಎಂದು ಪಾಕಿಸ್ತಾನ ದ ಮಾಜಿ ಕ್ರಿಕೇಟಿಗ ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಐದನೇ ಹೆಣ್ಣುಮಗುವನ್ನು ಎತ್ತಿಕೊಂಡು, ನಾಲ್ವರು ಪುತ್ರಿಯರೊಂದಿಗೆ ನಿಂತುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅಫ್ರಿದಿ ತಮ್ಮ ಕಸಿನ್ ನಾದಿಯಾ ಅವರನ್ನು ವಿವಾಹವಾಗಿದ್ದಾರೆ.
ಅವರಿಗೆ ಅಕ್ಸಾ, ಅಂಶಾ, ಅಜ್ವಾ ಮತ್ತು ಅಸ್ಮರಾ ಎಂಬ ಪುತ್ರಿಯರಿದ್ದಾರೆ. ಅಫ್ರಿದಿ ಹಿಂದೊಮ್ಮೆ ನಾನು ಪುತ್ರಿಯರನ್ನು ಹೊರಾಂಗಣ ಆಟಕ್ಕೆ ಬಿಡುವುದಿಲ್ಲ. ಒಳಾಂಗಣ ಆಟಕ್ಕಷ್ಟೇ ಅವರಿಗೆ ಅನುಮತಿ ನೀಡಿದ್ದೇನೆ. ಕ್ರಿಕೆಟ್, ಫುಟ್ಬಾಲ್ನಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಹೌದು, ಆದರೆ ಈಗ ಅಫ್ರಿದಿಗೆ ಐದನೇ ಹೆಣ್ಣು ಮಗು ಜನಿಸುತ್ತಿದ್ದಂತೆ ನೆಟ್ಟಿಗರು ಅವರನ್ನು ಸಿಕ್ಕಾಪಟೆ ಟ್ರೋಲ್ ಮಾಡುತ್ತಿದ್ದಾರೆ. ಹೆಚ್ಚಿನ ಪಾಲು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಬಳಕೆದಾರರೇ ಅಫ್ರಿದಿಯವರನ್ನು ಕಾಮೆಂಟ್ ಮೂಲಕ ಆಡಿಕೊಳ್ಳುತ್ತಿದ್ದಾರೆ. ಇನ್ನು ಬೇರೆಯವರು ಎಷ್ಟರಮಟ್ಟಿಗೆ ಆಡಿಕೊಳ್ಳಬಾರದು ಅಲ್ಲವಾ.
ಇನ್ನಾದರೂ ಸಾಕು ನಿಲ್ಲಿಸಿ ಎಂದು ಫನ್ ಆಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಫ್ರಿದಿಗೆ ಹೇಗಾದರೂ ಗಂಡು ಮಗುವನ್ನು ಪಡೆಯಬೇಕು ಎಂಬ ಇಚ್ಛೆ. ಮಗ ಹುಟ್ಟಿದರೆ ಕ್ರಿಕೆಟ್ ಫೀಲ್ಡ್ಗೆ ಇಳಿಸಬಹುದು ಎಂಬ ಆಸೆ. ಆದರೆ ದೇವರು ಹೆಣ್ಣುಮಕ್ಕಳನ್ನೇ ನೀಡುತ್ತಿದ್ದಾನೆ. ಅಫ್ರಿದಿಗೆ ತನ್ನ ಪುತ್ರಿಯರನ್ನು ಕ್ರೀಡಾಪಟುಗಳನ್ನಾಗಿಸುವಷ್ಟು ದೊಡ್ಡ ಮನಸು ಇಲ್ಲ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ. ನಿಮಗೆ ನಾಲ್ವರು ಹೆಣ್ಣುಮಕ್ಕಳು ಸಾಕಾಗುವುದಿಲ್ಲವಾ? ಜನಸಂಖ್ಯೆ ನಿಯಂತ್ರಣದ ಬಗ್ಗೆ ಯಾವಾಗ ಅರಿವು ಬೆಳೆಸಿಕೊಳ್ಳುತ್ತೀರಿ ಎಂದು ಕೂಡ ಕೆಲವರು ಪ್ರಶ್ನಿಸಿದ್ದಾರೆ.