ಎಂ ಎಸ್ ಧೋನಿ ಬಿಡುಗಡೆ ಮಾಡುತ್ತಿರುವ ಪರಿಸರ ಸ್ನೇಹಿ ಸಾವಯವ ಗೊಬ್ಬರದ ಹೆಸರು ಏನು ಗೊತ್ತಾ..?

Soma shekhar

ಕೊರೋನಾ ಹಿಡಿತಕ್ಕೆ ಭಾರತ ಸಿಕ್ಕಿದ ದಿನದಿಂದಲೂ ಕೂಡ ಭಾರತದಲ್ಲಿ  ನಡೆಯುತ್ತಿದ್ದ ಅನೇಕ ಉದ್ಯಮಗಳು, ಕಾರ್ಖಾನೆಗಳು ಹಾಗೂ ಕ್ರೀಡಾ ಚಟುವಟಿಕೆಗಳು ಮೂಲೆಗುಂಪಾಗಿದೆ ಇದರಿಂದಾಗಿ  ಇವುಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದ ಅನೇಕ ಮಂದಿ ಕೆಲಸವಿಲ್ಲದೆ ವಿವಿಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್  ಧೋನಿ ಈಗ ಕೃಷಿಯ ಕಡೆ ಮುಖಮಾಡಿ ಸಾವಯವ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ.   

 

ಹೌದು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇತರ ಕ್ರೀಡಾ ತಾರೆಗಳಂತೆ  ಯಾವುದೇ ಬ್ರಾಂಡ್ ಉತ್ಪನ್ನಗಳ ಉದ್ಯಮದಲ್ಲಿ ಹೂಡಿಕೆ ಮಾಡದೆ, ಕೃಷಿಯತ್ತ ಒಲವು ತೋರಿದ್ದಾರೆ. ಈಗಾಗಲೆ ಸಾವಯವ ಕೃಷಿಯ ಪ್ರೋತ್ಸಾಹ ಆರಂಭಿಸಿರುವ ಧೋನಿ, ಕೀಟನಾಶಕಗಳಿಂದ ಆಗುವ ಹಾನಿಯನ್ನು ತಪ್ಪಿಸಲು ತಮ್ಮದೇ ಕಂಪನಿಯಿಂದ ಪರಿಸರ ಸ್ನೇಹಿ ಸಾವಯವ ಗೊಬ್ಬರವನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದ್ದಾರೆ.

 

30 ವರ್ಷದ ಧೋನಿ ಶೀಘ್ರದಲ್ಲೇ ನಿಯೋ ಗ್ಲೋಬಲ್ ಹೆಸರಿನ ತಮ್ಮ ಕಂಪನಿಯಿಂದ ಸಾವಯವ ಗೊಬ್ಬರವನ್ನು ಮಾರುಕಟ್ಟೆಗೆ ತರಲಿದ್ದಾರೆ ಎಂದು ಅವರ ಮ್ಯಾನೇಜರ್ ಹಾಗೂ ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ತಿಳಿಸಿದ್ದಾರೆ. ಧೋನಿ ಅವರ ಫಾರ್ಮ್ ಹೌಸ್‌ನಲ್ಲಿ ಈಗಾಗಲೆ ಗೊಬ್ಬರದ ಪರೀಕ್ಷೆಯೂ ನಡೆದಿದೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಧೋನಿ, ಕೀಟನಾಶಕಗಳಿಂದ ಆಗುವ ಹಾನಿಯ ಬಗ್ಗೆ ಮಾನತಾಡಿದ ವಿಡಿಯೋ ಒಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಲಾಕ್‌ಡೌನ್ ಸಮಯದಲ್ಲಿ ಅವರು ಟ್ರ್ಯಾಕ್ಟರ್ ಚಲಾಯಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.

 

 'ನಾವು ತಜ್ಞರ ಮತ್ತು ವಿಜ್ಞಾನಿಗಳ ತಂಡವನ್ನು ಹೊಂದಿದ್ದೇವೆ. ಅವರು ಸಾವಯವ ಗೊಬ್ಬರವನ್ನು ಅಭಿವೃದ್ಧಿಪಡಿಸಿದ್ದಾರೆ. 2-3 ತಿಂಗಳಲ್ಲಿ ಅದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ' ಎಂದು ದಿವಾಕರ್ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಜಾಹೀರಾತು ಒಪ್ಪಂದಗಳಂಥ ವಾಣಿಜ್ಯ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿರುವ ಧೋನಿ, ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಯಾವುದೇ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ.

 

ಧೋನಿ 40-50 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅಲ್ಲಿ ಅವರು ಪಪಾಯ, ಬಾಳೆಹಣ್ಣು ಮುಂತಾದ ಸಾವಯವ ಬೆಳೆ ಬೆಳೆಯುತ್ತಿದ್ದಾರೆ. ಎಲ್ಲವೂ ಸಹಜಸ್ಥಿತಿಗೆ ಬರುವವರೆಗೆ ಧೋನಿ ಬ್ರಾಂಡ್‌ಗಳ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿಯಲಿದ್ದಾರೆ. ಯಾವುದೇ ವಾಣಿಜ್ಯ ಚಟುವಟಿಕೆಯಲ್ಲಿ ಅವರು ಭಾಗವಹಿಸುವುದಿಲ್ಲ' ಎಂದು ದಿವಾಕರ್ ತಿಳಿಸಿದ್ದಾರೆ. ಅವರು ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.

 

Find Out More:

Related Articles: