ಕೇಂದ್ರ ಸರ್ಕಾರದ ಆರೋಗ್ಯ ಸೇತು ಆಪ್‌ನಿಂದ ದೇಶದ ಜನರಿಗೆ ಮತ್ತಷ್ಟು ಉಪಯೋಗ : ಅಷ್ಟಕ್ಕೂ ಆ ಉಪಯೋಗ ಏನು ಗೊತ್ತಾ..?

Soma shekhar

ಕೊರೋನಾ ವೈರಸ್ ಇಂದಾಗಿ ಇಡೀ ಪ್ರಪಂಚವೇ ತಲ್ಲಣಗೊಂಡಿರುವ ಈ ಸಂದರ್ಭದಲ್ಲಿ ಕೊರೋನಾ ವೈರಸ್ ತಡೆಗೆ ಸಾಕಷ್ಟು ಸಂಶೋಧನೆಯನ್ನು ಮಾಡಲಾಗುತ್ತಿದೆ. ಈ ನಡುವೆ  ಭಾರತ ಈ ಕೊರೋನಾ ವೈರಸ್ ಕುರಿತು ಮಾಹಿತಿಯನ್ನು ನೀಡಲು ಹಾಗೂ ಕೊರೊನಾ ವೈರಸ್ ಇಂದಾಗಿ ಎಚ್ಚರದಿಂದ ಇರಲು ಆರೋಗ್ಯ ಸೇತು ಎಂಬ ಆಪ್ ಅನ್ನು ಬಿಡುಗಡೆ ಮಾಡಿ ದೇಶದ ನಾಗರೀಕರು ಇದನ್ನು ಬಳಸುವಂತೆ ಕೇಂದ್ರ ಸರ್ಕಾರ ಮನವಿಯನ್ನು ಮಾಡಿತ್ತು. ಇದಾದ ನಂತರ ಈ ಅಪ್ಲಿಕೇಶನ್ ನಲ್ಲಿ ಮತ್ತಷ್ಟು ಹೊಸ ವೈಶಿಷ್ಟಯತೆಯನ್ನು ನೀಡಲಾಗಿದೆ. ಈ ಮೂಲಕ ದೇಶದ ನಾಗರೀಕರಿಗೆ ಕೊರೊನಾ ಬಗ್ಗೆ ಎಚ್ಚರವಾಗಿರಲು ಹಾಗೂ ಕೊರೋನಾ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಆರೋಗ್ಯ ಸೇತು ಮತ್ತಷ್ಟು ಸಹಕಾರಿಯಾಗಿದೆ. ಅಷ್ಟಕ್ಕೂ ಆರೋಗ್ಯ ಸೇತು ಆಪ್ ನಲ್ಲಿ ಹೊಸದಾಗಿ ಅಳವಡಿಸಿರುವ ಸೌಲಭ್ಯಗಳೇನು ಗೊತ್ತಾ..?

 

ಕರೋನಾಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈಗ ಸರ್ಕಾರವು ಈ ಅಪ್ಲಿಕೇಶನ್‌ನಲ್ಲಿ ಬಹಳ ಮುಖ್ಯವಾದ ವೈಶಿಷ್ಟ್ಯವನ್ನು ಸೇರಿಸಲು ಹೊರಟಿದೆ. ಈ ಅಪ್ಲಿಕೇಶನ್‌ ಮೂಲಕ ಈಗ ಬಳಕೆದಾರರು ಕರೆ ಮಾಡುವ ಮೂಲಕ ಅಥವಾ ವೀಡಿಯೊ ಕರೆ ಮಾಡುವ ಮೂಲಕ ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಾವು ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಹ ಸಾಧ್ಯವಾಗುತ್ತದೆ. ಚೆಕಪ್ ಜೊತೆಗೆ ಬಳಕೆದಾರರು ಆನ್‌ಲೈನ್‌ನಲ್ಲಿ ಔಷಧಿಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.

 

ಈ ಆಯಪ್ ಮೂಲಕ ಶೀಘ್ರದಲ್ಲೇ ಇ-ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಲಾಕ್ಡೌನ್(Lockdown)‌ನಲ್ಲಿ ನಿರ್ಗಮಿಸಲು ಇ-ಪಾಸ್ ಅನ್ನು ಬಳಸಬಹುದು. ಇಲ್ಲಿಯವರೆಗೆ ಜನರು ಫೋನ್, ವಾಟ್ಸಾಪ್ ಅಥವಾ ಆನ್‌ಲೈನ್ ಮೂಲಕ ಇ-ಪಾಸ್ಗಾಗಿ ಅರ್ಜಿ ಸಲ್ಲಿಸಬೇಕಾಗಿತ್ತು.

ಈ ಸೇವೆಗಾಗಿ ಸುಮಾರು 200 ವೈದ್ಯರು ಆರೋಗ್ಯ ಸೇತು ಆಯಪ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.

 

 

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಎಲ್ಲೆಡೆ ನಿರ್ದೇಶನ ನೀಡಲಾಗಿದೆ. ಇಲ್ಲಿಯವರೆಗೆ ಆರೋಗ್ಯ ಸೇತು ಆಯಪ್ ಅನ್ನು ಸುಮಾರು ಒಂಬತ್ತು ಕೋಟಿ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜನರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಜನರಿಗೆ ಕೆಲಸ ಒದಗಿಸುವ ಯೋಜನೆಯನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಹೆಚ್ಚಿನ ಜನರು ಕೆಲಸಕ್ಕೆ ಸೇರುವ ಸಲುವಾಗಿ ದೇಶಾದ್ಯಂತ 20 ಲಕ್ಷ 'ಸುರಕ್ಷಾ ಮಳಿಗೆಗಳನ್ನು' (Suraksha Store) ತೆರೆಯಲು ಸರ್ಕಾರ ಯೋಜಿಸುತ್ತಿದೆ.\

 

ವಿಶೇಷವೆಂದರೆ ಜನರ ಸುರಕ್ಷತೆಗಾಗಿ ಈ ಮಳಿಗೆಗಳನ್ನು 'ಆರೋಗ್ಯ ಸೇತು ಆಯಪ್' (Aarogya Setu App)ನೊಂದಿಗೆ ಜೋಡಿಸಲಾಗುತ್ತದೆ. ಮೊಹಲ್ಲಾಗಳ ಕಿರಾನಾ ಮಳಿಗೆಗಳನ್ನು ಆಯ್ಕೆ ಮಾಡಿ ಅವುಗಳನ್ನು 'ಭದ್ರತಾ ಮಳಿಗೆ'ಗಳಾಗಿ ಪರಿವರ್ತಿಸುವುದು ಸರ್ಕಾರದ ಯೋಜನೆಯಾಗಿದೆ.

 

Find Out More:

Related Articles: