'ಫೇಸ್ಬುಕ್ ಶಾಪ್ಸ್ ಹೆಸರಿನಲ್ಲಿ ಇ-ಕಾಮರ್ಸ್ ರಂಗದಲ್ಲೂ ಮಿಂಚಲಿದ್ಯಾ ಫೇಸ್ ಬುಕ್..?
ಜಗತ್ತಿನಾಧ್ಯಂತ ಜನಪ್ರಿಯವಾಗಿ ಫೇಸ್ ಬುಕ್ ಜನ ಸಾಮಾನ್ಯರಲ್ಲಿ ಬೆರೆತು ಹೋಗಿದೆ. ಇದು ಜನರ ನಡುವೆ ಸಂವಹನವನ್ನು ನಡೆಸಲು ಸಹಕಾರಿಯಾಗಿದೆ ಹಾಗೂ ಜನರ ಅಭಿಪ್ರಾಯಗಳನ್ನು ಹಂಚಿಕೊಳ್ಳುವಲ್ಲಿ ಈ ಫೇಸ್ ಬುಕ್ ಪ್ರಯೋಜನಕಾರಿ ಆದರೆ ಇಂದು ಫೇಸ್ ಬುಕ್ ಕೇವಲ ಸಂವಹನ ಮಾಧ್ಯಮವಾಗಲ್ಲದೆ ಇ ಕಾಮರ್ಸ್ ರಂಗಕ್ಕೂ ಫೇಸ್ ಬುಕ್ ಕಾಲಿಟ್ಟಿದೆ.
ಹೌದು ವಾಣಿಜ್ಯ ವಹಿವಾಟಿಗೆ ಪ್ರಸ್ತುತ ಆನ್ಲೈನ್ ವೇದಿಕೆ ಅತಿ ಮುಖ್ಯ ಎಂಬುದು ಸಾಬೀತಾಗಿರುವ ಅಂಶ. ಹೀಗಾಗಿ ಹೆಚ್ಚು ಹೆಚ್ಚು ಕಂಪನಿಗಳು ಇ-ಕಾಮರ್ಸ್ಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಇದೀಗ ಫೇಸ್ಬುಕ್ ಕೂಡ ಇದರತ್ತ ಗಮನ ಹರಿಸಿದೆ ಎಂಬುದು ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ.
ಹೌದು.. ಫೇಸ್ಬುಕ್ ಶಾಪ್ಸ್ ಓಪನ್ ಆಗಲಿದೆ. ನಮ್ಮ 'ಲೈಕ್'ಗಳನ್ನು buyಗೆ ಮಾರ್ಪಾಡಿಸಲು ಕಂಪನಿ ಯೋಜನೆ ರೂಪಿಸಿದೆ. ಇ-ಕಾಮರ್ಸ್ನ ದೈತ್ಯ ಕಂಪನಿ ಅಮೆಜಾನ್ಗೆ ಟಕ್ಕರ್ ಕೊಡಲು ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ.
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ವಾಣಿಜ್ಯ ವಹಿವಾಟಿಗೆ ಕಂಪನಿ ಮುಂದಾಗಿದೆ. ಇದಷ್ಟೇ ಅಲ್ಲ, ವಾಟ್ಸ್ಆಯಪ್ ಹಾಗೂ ಮೆಸೆಂಜರ್ನಲ್ಲೂ ಕೂಡ ಇದನ್ನು ಪರಿಚಯಿಸಲಿದೆ. ಜಾಗತಿಕವಾಗಿ ಇದರ ಸ್ವರೂಪ ಹೇಗಿರಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಫೇಸ್ಬುಕ್ ಜಗತ್ತಿನಲ್ಲಿಯೇ ಅತಿದೊಡ್ಡ ಸಾಮಾಜಿಕ ಜಾಲತಾಣದ ಆಯಪ್ ಆಗಿದೆ. ಇದಲ್ಲದೇ. ಇನ್ಸ್ಟಾಗ್ರಾಂ, ವಾಟ್ಸ್ಆಯಪ್, ಮೆಸೆಂಜರ್ ಮೊದಲಾದ ಆಯಪ್ಗಳನ್ನು ತನ್ನ ಬತ್ತಳಿಕೆಯಲ್ಲಿ ಹೊಂದಿದೆ. ಇವೆಲ್ಲವುಗಳನ್ನು ಬಳಸಿಕೊಂಡು ಬಳಕೆದಾರರಿಗೆ ಆನ್ಲೈನ್ ಶಾಪಿಂಗ್ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ. ಇದಕ್ಕಾಗಿ 'ಫೇಸ್ಬುಕ್ ಶಾಪ್ಸ್' ತೆರೆಯಲಿದೆ. ಇಲ್ಲಿ ಯಾವುದೇ ವಸ್ತುವನ್ನು ಮಾರಾಟ ಮಾಡಲು ವಹಿವಾಟುದಾರರಿಗೆ ಅವಕಾಶ ಕಲ್ಪಿಸಲಿದೆ. ಇದು ಅಕ್ಷರಶಃ ಅಮೆಜಾನ್ ವರ್ಸ್ಸ್ ಫೇಸ್ಬುಕ್ ಆಗಿರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸದ್ಯ ಸಣ್ಣ ಉದ್ದಿಮೆದಾರರು ಸಂಕಷ್ಟದಲ್ಲಿದ್ದಾರೆ. ತಮ್ಮ ವಹಿವಾಟುಗಳನ್ನು ಮುಚ್ಚುತ್ತಿದ್ದಾರೆ. ಹೆಚ್ಚಿನವರು ತಮ್ಮ ವಹಿವಾಟುಗಳನ್ನು ಆನ್ಲೈನ್ಗೆ ತರಲು ಬಯಸುತ್ತಿದ್ದಾರೆ. ಶಾಪಿಂಗ್ಅನ್ನು ಸರಾಗವಾಗಿಸಿ ಸಣ್ಣ ಉದ್ದಿಮೆದಾರರಿಂದ ಹಿಡಿದು ಜಾಗತಿಕ ಬ್ರ್ಯಾಂಡ್ವರೆಗಿನ ಎಲ್ಲ ಉತ್ಪನ್ನಗಳನ್ನು ನಮ್ಮ ಆಯಪ್ಗಳ ಮೂಲಕ ಗ್ರಾಹಕರ ಜತೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಫೇಸ್ಬುಕ್ ತಿಳಿಸಿದೆ.
ಈಗಾಗಲೇ ರಿಲಯನ್ಸ್ ಜಿಯೋ ಫ್ಲಾಟ್ಫಾರ್ಮ್ನಲ್ಲಿ ಫೇಸ್ಬುಕ್ 43 ಸಾವಿರ ಕೋಟಿ ರೂ. ಗೂ ಅಧಿಕ ಹೂಡಿಕೆ ಮಾಡಿದೆ. ಇದು ಕಂಪನಿ ವಾಣಿಜ್ಯ ವಹಿವಾಟಿನ ವಿಸ್ತರಣೆ ಭಾಗವಾಗಿದೆ. ಕೋವಿಡ್ ಕಾರಣದಿಂದಾಗಿ ಜಾಹೀರಾತು ಆದಾಯದಲ್ಲಿ ಭಾರಿ ಇಳಿಕೆಯಾಗಿರುವುದರಿಂದ ಇತರ ಅವಕಾಶಗಳತ್ತ ಕಂಪನಿ ಕಣ್ಣುಹಾಕಿದೆ.