ಪ್ಲಿಫ್ ಕಾರ್ಟ್ ನಲ್ಲಿ ಇನ್ನು ಮುಂದೆ ಮೋಟರ್ ಇನ್ಶೂರೆನ್ಸ್ ಗೂ ಅವಕಾಶ : ಅದು ಹೇಗೆ ಅಂತೀರ ಇಲ್ಲಿದೆ ನೋಡಿ..!!

Soma shekhar

ಪ್ಲಿಪ್ ಕಾರ್ಟ್ ಇದು ಒಂದು ಇ ಕಾಮರ್ಸ್ ನಲ್ಲಿ ಬಹಳವಾದ ಖ್ಯಾತಿಯನ್ನು ಗಳಿಸಿರುವಂತಹ ಒಂದು ಸಂಸ್ಥೆ. ಇದರ ಮೂಲಕ ಜನರು ಮನೆಯಲ್ಲೇ ಕೂತು ಆನ್ ಲೈನ್ ಮೂಲಕ ಶಾಂಪಿಂಗ್ ಮಾಡುವಂತಹ ಸೌಲಭ್ಯವನ್ನು ಇ ಕಾಮರ್ಸ್ ನೀಡುವ ಮೂಲಕ  ಆನ್ ಲೈನ್ ಮಾರುಕಟ್ಟೆಯಲ್ಲಿ  ಕ್ರಾಂತಿಯನ್ನೇ ಮಾಡಿದ್ದ ಪ್ಲಿಪ್ ಕಾರ್ಟ್ ಇಂದು ಮೋಟಾರ್ ಇನ್ಶೂರೆನ್ಸ್ ರಂಗಕ್ಕೂ ಕಾಲಿಟ್ಟಿದೆ.

 

 ಹೌದು ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ ಮತ್ತು ದೇಶದ ಪ್ರಮುಖ ಖಾಸಗಿ ವಿಮಾ ಕಂಪನಿಯಾಗಿರುವ ಬಜಾಜ್ ಅಲಾಯನ್ಜ್ ಜನರಲ್ ಇನ್ಶೂರೆನ್ಸ್ ಕಂಪನಿ ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಡಿಜಿಟಲ್ ಮೋಟರ್ ಇನ್ಶೂರೆನ್ಸ್ ಪಾಲಿಸಿ ನೀಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

 

ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ವಾಹನಗಳ ಮಾಲೀಕರು ತಮ್ಮ ವಾಹನದ ಕಾರ್ಯನಿರ್ವಹಣೆ ಮತ್ತು ಫಿಟ್‍ನೆಸ್ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಬಜಾಜ್ ಅಲಾಯನ್ಜ್ ಮೋಟರ್ ಇನ್ಶೂರೆನ್ಸ್ ಪಾಲಿಸಿಗಳನ್ನು 4 ಚಕ್ರ ಮತ್ತು ದ್ವಿಚಕ್ರವಾಹನಗಳಿಗೆ ಪೂರೈಸುತ್ತಿದೆ.

 

ಹಲವಾರು ವಿನೂತನವಾದ ಪ್ರಯೋಜನಗಳೊಂದಿಗೆ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಅವರಿಗಿರುವ ಭೀತಿಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ಪಾಲಿಸಿಗಳನ್ನು ನೀಡುತ್ತಿದೆ. ಗ್ರಾಹಕರು ಫ್ಲಿಪ್‍ಕಾರ್ಟ್ ಆಯಪ್ ಅನ್ನು ಬಳಸಿಕೊಂಡು ಈ ಮೋಟರ್-ಇನ್ಶೂರೆನ್ಸ್ ಅನ್ನು ಖರೀದಿಸಬಹುದಾಗಿದೆ.

 

ಈ ಬಗ್ಗೆ ಮಾತನಾಡಿದ ಫ್ಲಿಪ್‍ಕಾರ್ಟ್‍ನ ಫಿನ್‍ಟೆಕ್ ಅಂಡ್ ಪೇಮೆಂಟ್ಸ್ ಗ್ರೂಪ್‍ನ ಮುಖ್ಯಸ್ಥ ರಂಜಿತ್ ಬೋಯನಪಲ್ಲಿ, "ನಮ್ಮ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಆತಂಕಕ್ಕೆ ಒಳಗಾಗಿರುವ ಗ್ರಾಹಕರಿಗೆ ಪರಿಹಾರ ನೀಡಿ ಅವರನ್ನು ನೆಮ್ಮದಿಯಾಗಿರುವಂತೆ ಮಾಡುವುದು ನಮ್ಮ ಈ ಯೋಜನೆಯ ಉದ್ದೇಶವಾಗಿದೆ. ಕಳೆದ ಕೆಲವು ತಿಂಗಳಿಂದ ಭಾರತೀಯ ಗ್ರಾಹಕರ ಅಭಿರುಚಿಯನ್ನು ಅರ್ಥ ಮಾಡಿಕೊಂಡಿದ್ದೇವೆ.

 

ಇದರನ್ವಯ ಫ್ಲಿಪ್‍ಕಾರ್ಟ್ ಜೀವವಿಮೆ, ಆರೋಗ್ಯ ಮತ್ತು ಡಿವೈಸ್‍ಗಳಿಗೆ ಹಲವಾರು ವಿಮಾ ಯೋಜನೆಗಳನ್ನು ನೀಡುತ್ತಿದೆ. ನಮ್ಮ ಪ್ಲಾಟ್‍ಫಾರ್ಮ್‍ನಲ್ಲಿ ಬರುವ ನಮ್ಮ ಗ್ರಾಹಕರಿಗೆ ಈ ಪರೀಕ್ಷೆಯ ಸಂದರ್ಭದಲ್ಲಿ ಅತ್ಯಂತ ಪ್ರಮುಖವಾದ ಪರಿಹಾರಗಳನ್ನು ಒದಗಿಸುತ್ತಿದೆ. ಮೋಟರ್-ಇನ್ಶೂರೆನ್ಸ್‍ನಲ್ಲಿ ಗ್ರಾಹಕರು ತಮ್ಮ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ನಾವು ಬಜಾಜ್ ಅಲಾಯನ್ಜ್ ಪಾಲುದಾರಿಕೆಯೊಂದಿಗೆ ಗ್ರಾಹಕ ಆಧಾರಿತ ಸೇವೆಯನ್ನು ಒದಗಿಸುತ್ತಿದ್ದೇವೆ. ಇದು ವಾಹನ ವಿಮೆ ಉದ್ಯಮದಲ್ಲಿ ಅತ್ಯಂತ ಹೆಚ್ಚು ಪ್ರಯೋಜನ ನೀಡುವಂತಹ ವಿಮೆ ಆಗಿದೆ'' ಎಂದು ತಿಳಿಸಿದರು.

 

ಬಜಾಜ್ ಅಲಾಯನ್ಜ್ ಜನರಲ್ ಇನ್ಶೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ & ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಪನ್ ಸಿಂಘೆಲ್ ಮಾತನಾಡಿ, "ನಾವು ನಮ್ಮ ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ವಿಮೆ ಪರಿಹಾರಗಳನ್ನು ನೀಡುತ್ತಿದ್ದೇವೆ. ಇದರ ಜತೆಗೆ ಇದೀಗ ಫ್ಲಿಪ್‍ಕಾರ್ಟ್ ಜತೆ ಸೇರಿ ಮೊಬೈಲ್ ಇನ್ಶೂರೆನ್ಸ್ ನೀಡುತ್ತಿದ್ದೇವೆ. ಈ ಮೋಟರ್ ಇನ್ಶೂರೆನ್ಸ್ ಅನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತದೆ. ಇದು ನಮ್ಮ ವಿತರಣಾ ಮೂಲವನ್ನು ಬಲಪಡಿಸುವುದಷ್ಟೇ ಅಲ್ಲ, ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಅತ್ಯುತ್ಕಷ್ಠವಾದ ಸೇವೆಯನ್ನು ಒದಗಿಸುತ್ತದೆ'' ಎಂದು ಹೇಳಿದರು.

 

Find Out More:

Related Articles: