ಕೊರೋನಾ ಪತ್ತೆಗೆ ನೆರವಾಗಲಿದ್ಯಾ ಗೂಗಲ್ ಸಂಸ್ಥೆಯ ಹೊಸ ಪೀಚರ್..?

Soma shekhar

ಕೊರೋನಾ ವೈರಸ್ ಈಗಾಗಲೇ ಇಡೀ ವಿಶ್ವದಾಧ್ಯಂತ ವ್ಯಾಪಿಸಿ ಲಕ್ಷಾಂತರ ಜನರ ಪ್ರಾಣವನ್ನು ತೆಗೆದು ಕೊಂಡಿದೆ, ಈಗಾಗಲೇ ಕೊರೋನಾ ವೈರಸ್ ಅನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಅದೇ ರೀತಿ ಕೊರೋನಾ ವೈರಸ್ಅನ್ನು ಪತ್ತೆ ಮಾಡುವಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದೇ ರೀತಿ ಗೂಗಲ್ ಕೂಡ ಕೊರೋನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿಯನ್ನು ನೀಡುವ ಹೊಸ ಪ್ಯೂಚರ್ ಅನ್ನು  ಬಿಡುಗಡೆ ಮಾಡಿದೆ.

 

ಹೌದು ವಿಶ್ವದ ನಂಬರ್ ಒನ್ ಸರ್ಚ್‌ ಇಂಜಿನ್ ಗೂಗಲ್ ಹೊಸ ಫೀಚರ್‌ವೊಂದನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಬಳಕೆದಾರರು ತಮ್ಮ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಸರ್ಚ್‌ ಇಂಜಿನ್‌ ದಿಗ್ಗಜ ಗೂಗಲ್‌ ಮತ್ತೊಂದು ಹೊಸ ಫ್ಯೂಚರ್‌ ಬಿಡುಗಡೆ ಮಾಡಿದ್ದು, ಕೋವಿಡ್‌-19 ಪರೀಕ್ಷಾ ಕೇಂದ್ರಗಳನ್ನು ತಿಳಿದುಕೊಳ್ಳಲು ಗೂಗಲ್‌ ಸಹಾಯ ಮಾಡಲಿದೆ. ಕೇಂದ್ರಗಳ ವ್ಯಾಪ್ತಿಯ ಬಗ್ಗೆ ಸರ್ಚ್‌, ಮ್ಯಾಪ್‌ನಲ್ಲಿ ಬಳಕೆದಾರರು ತಮ್ಮ ಸಮೀಪದ ಕೋವಿಡ್‌-19 ಪರೀಕ್ಷಾ ಕೇಂದ್ರಗಳನ್ನು ತಿಳಿದುಕೊಳ್ಳಲು ಗೂಗಲ್‌ ಅವಕಾಶ ಕಲ್ಪಿಸಿದೆ.

 

ಗೂಗಲ್‌ನಲ್ಲಿ ಈಗಾಗಲೇ ಬಳಕೆದಾರು ಸುಲಭವಾಗಿ ತಮ್ಮ ಹತ್ತಿರದ ಹೋಟೆಲ್, ರೆಸ್ಟೊರೆಂಟ್, ಆಸ್ಪತ್ರೆ, ಮಾಲ್‌ಗಳನ್ನು ಹುಡುಕಬಹುದಾಗಿದೆ. ಈಗ ಅದೇ ರೀತಿ ಗೂಗಲ್ ಮೂಲಕ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಸಿಗಲಿದೆ.

ಗೂಗಲ್ ಮ್ಯಾಪ್, ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಸಂಯೋಜನೆಯೊಂದಿಗೆ ಈ ಹೊಸ ಫೀಚರ್ ಬಳಕೆದಾರರಿಗೆ ಲಭ್ಯವಿದೆ ಎಂದು ಗೂಗಲ್ ಮಾಹಿತಿ ನೀಡಿದೆ. ಶುಕ್ರವಾರ ಈ ಬಗ್ಗೆ ಸುದ್ದಿ ನೀಡಿದ್ದು, ಗೂಗಲ್ ಇನ್ನು ಮುಂದೆ ಬಳಕೆದಾರರು ತಮ್ಮ ಹತ್ತಿರದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ಹುಡುಕಬಹುದಾಗಿದೆ ಎಂದು ತಿಳಿಸಿದೆ.

 

ಈ ಫೀಚರ್ ಸರ್ಕಾರದಿಂದ ಅನುಮತಿ ಪಡೆದಿದೆ. ಸುಮಾರು 700 ಕೊರೊನಾ ಪರೀಕ್ಷಾ ಕೇಂದ್ರಗಳು ಈಗಾಗಲೇ ಗೂಗಲ್ ಸರ್ಚ್‌ನಲ್ಲಿ ನೋಂದಣಿ ಮಾಡಲಾಗಿದೆಯಂತೆ. ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) My gov ಫ್ಲಾಟ್‌ ಫಾರ್ಮಿನೊಂದಿಗೆ ಜೊತೆಯಾಗಿ ಈ ಯೋಜನೆಗೆ ಮಾಡಿದೆ ಎಂದು ಗೂಗಲ್‌ ತಿಳಿಸಿದೆ

 

ಫ್ಯೂಚರ್ ವಿಶೇಷತೆಗಳು: ಹೊಸ ಫ್ಯೂಚರ್ಷ್‌ನಲ್ಲಿ ಇಂಗ್ಲಿಷ್‌ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ, ಬೆಂಗಾಳಿ ಭಾಷೆಯಲ್ಲೂ ಸೇವೆ ನೀಡಲಿದೆ. ಯಾರಾದರೂ ಗೂಗಲ್‌ನಲ್ಲಿ ಕೋವಿಡ್‌-19ಗೆ ಸಂಬಂಧಿಸಿದ ವಿಷಯಗಳನ್ನು ಸರ್ಚ್‌ ಮಾಡಿದರೆ, ಇನ್ನು ಮುಂದೆ ಸಮೀಪದಲ್ಲಿ ಟೆಸ್ಟಿಂಗ್‌ ಲ್ಯಾಬ್‌ ಮಾಹಿತಿ ಸಿಗಲಿದೆ. ಪ್ರಸ್ತುತ 300 ನಗರಗಳಲ್ಲಿನ 700 ಟೆಸ್ಟಿಂಗ್‌ ಲ್ಯಾಬ್‌ಗಳ ವಿವರಗಳನ್ನು ಗೂಗಲ್‌ನಲ್ಲಿ ಮಾಹಿತಿ ಸಿಗಲಿದೆ. ಶೀಘ್ರದಲ್ಲೇ ಉಳಿದ ನಗರಗಳಿಗೆ ಈ ಸೇವೆಗಳನ್ನು ವಿಸ್ತರಿಸುವುದಾಗಿ ಗೂಗಲ್‌ ಸಂಸ್ಥೆ ತಿಳಿಸಿದೆ.

 

 

 

Find Out More:

Related Articles: