
ಲಾಕ್ ಡೌನ್ ಪರಿಣಾಮದಿಂದ ಉಂಟಾದ ಕೌಟುಂಬಿಕ ಕಲಹಗಳ ದೂರುಗಳು ಎಷ್ಟು ಗೊತ್ತಾ?
ನವದೆಹಲಿ: ಕೋವಿಡ್ 19 ವೈರಸ್ ಸಮುದಾಯಕ್ಕೆ ಹರಡುವುದನ್ನು ನಿರ್ಬಂಧಿಸಲು ಭಾರತ ಸರಕಾರವು ಮಾರ್ಚ್ 24ರಿಂದ 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಗೆ ಆದೇಶ ನೀಡಿದೆ. ಈ ಸಂದರ್ಭದಲ್ಲಿ ಎಲ್ಲಾ ಕಂಪೆನಿಗಳು, ಕಛೇರಿಗಳು, ಸಾರಿಗೆ ವ್ಯವಸ್ಥೆ, ಹೊಟೇಲ್, ಪ್ರವಾಸೋದ್ಯಮ, ದಿನಗೂಲಿ ಕಾರ್ಮಿಕರು ಸೇರಿದಂತೆ ದೇಶಾದ್ಯಂತ ಎಲ್ಲವೂ ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಕೆಲಸವಿಲ್ಲದೆ ಸಾಕಷ್ಟು ಜನರು ಮನೆಯಲ್ಲೇ ಇರುವುದರಿಂದ ಮನೆಯಲ್ಲಿ ಕೌಂಟುಂಭಿಕ ಕಲಹಗಳು ಹೆಚ್ಚಾಗಿದೆ ಎಂಬ ವರದಿ ದಾಖಲಾಗಿದೆ. ಈ ಬಗ್ಗೆ ದಾಖಲಾದ ವರದಿಗಳ ಬಗ್ಗೆ ಮಾಹಿತಿ ಇಲ್ಲಿದೆ
ಇಡೀ ದೇಶವೇ ಲಾಕ್ ಡೌನ್ ಆಗಿ ಎಲ್ಲಾ ಕಾರ್ಯಕ್ಷೇತ್ರಗಳು ಬಂದ್ ಆಗಿರುವರುವ ಪರಿಣಾಮವಾಗಿ ದುಡಿದು ಸಂಪಾದಿಸಿ ಮನೆ ವ್ಯವಹಾರಗಳನ್ನು ನೋಡಿಕೊಳ್ಳಬೇಕಾದ ಗಂಡಸರು ಮನೆಯಲ್ಲೇ ಕುಳಿತುಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಈ ಪರಿಸ್ಥಿತಿಯಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂಬ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ರಾಷ್ಟ್ರೀಯ ಮಹಿಳಾ ಆಯೋಗವು (ಓಅW) ಮಾರ್ಚ್ 23 ರಿಂದ 30ರವರೆಗೆ ಸುಮಾರು 58 ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅದರಲ್ಲೂ ಹೆಚ್ಚಿನ ದೂರುಗಳು ಪಂಜಾಬ್ ರಾಜ್ಯದಿಂದ ಬಂದಿರುವುದು ಇನ್ನೊಂದು ವಿಶೇಷ.
ಗಂಡಸರು ಇದೀಗ ಅನಿವಾರ್ಯವಾಗಿ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಒದಗಿಬಂದಿದೆ. ಆದರೆ ಇದರ ನೇರ ಪರಿಣಾಮ ಮನೆಯಲ್ಲಿರುವ ಹೆಂಗಸರ ಮೇಲೆ ಉಂಟಾಗುತ್ತಿದೆ. ಗಂಡಸರು ತಮ್ಮ ಸಿಟ್ಟು ಒತ್ತಡವನ್ನೆಲ್ಲಾ ಮನೆ ಹೆಂಗಸರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಈ ಅವಧಿಯಲ್ಲಿ ದಾಖಲುಗೊಂಡಿರುವ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ದೂರುಗಳ ಅಂಕಿ ಅಂಶಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಇನ್ನು, ಮಹಿಳೆಯರ ಮೇಲೆ ನಡೆಯುವ ಎಲ್ಲಾ ಕೌಟುಂಬಿಕ ದೌರ್ಜನ್ಯಗಳೂ ದೂರು ನೀಡುವ ಹಂತದವರೆಗೆ ಹೋಗುವುದಿಲ್ಲ. ಹಾಗಾಗಿ ಈ ಸಂಕಷ್ಟದ ಅವಧಿಯಲ್ಲಿ ಮನೆಯ ಪುರುಷರ ಮಾನಸಿಕ ಒತ್ತಡ, ಕೋಪ-ತಾಪಗಳಿಗೆ ತಲೆಕೊಡಬೇಕಾಗಿರುವುದು ಆ ಮನೆಯ ಗೃಹಿಣಿಯರೇ ಆಗಿರುತ್ತಾರೆಂಬುದು ಮಾತ್ರ ವಿಷಾದನೀಯವೇ ಸರಿ.